ಮನರಂಜನೆಮೈಸೂರು

ಪುಷ್ಪರಗಳೆಯನ್ನೇ ಬೆಳ್ಳಿತೆರೆಯ ಮೇಲೆ ಮೂಡಿಸುವ ಸ್ತುತ್ಯಾರ್ಹ ಕಾರ್ಯ ಶ್ಲಾಘನೀಯ : ಡಾ.ಸಿ.ಪಿ.ಕೃಷ್ಣಕುಮಾರ್

‘ಹೂವಿನ ಹಾರ’ ಚಿತ್ರಕ್ಕೆ ಕ್ಲಾಪ್

ಮೈಸೂರು,ಏ.4:- ‘ಹೂವಿನ ಹಾರ’ ಚಿತ್ರ ಅದ್ಭುತ ಯಶಸ್ಸನ್ನು ಕಾಣಲಿ ಎಂದು ಖ್ಯಾತ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಶುಭಹಾರೈಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿಯಿಂದು ಕುವೆಂಪು ಪ್ರತಿಮೆಗೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು. ಬಳಿಕ ಮಾತನಾಡಿದ ಅವರು ಪುಷ್ಪರಾಶಿ ಆರಾಧ್ಯವಾದದ್ದು. ಹಿಂದೆ ‘ಹರಿಹರ’ ಎನ್ನುವ ರಗಳೆ ಕವಿಯಿದ್ದರು. ಅವರು ಅನೇಕ ರಗಳೆಗಳನ್ನು ‘ಶಿವಶರಣ’ರ ಕುರಿತು ರಚಿಸಿದ್ದರು. ಬಳಿಕ ಪುಷ್ಪರಗಳೆಯನ್ನೂ ರಚಿಸಿದ್ದರು. ಅದರಲ್ಲಿ ಕಥೆಯಿಲ್ಲ. ಪಾತ್ರವಿಲ್ಲ, ಹೂಗಳ ವರ್ಣನೆ, ನಿವೇದನೆ ಮಾತ್ರವಿತ್ತು. ಪುಷ್ಪರಗಳೆಯನ್ನೇ ಸಿದ್ದೇಗೌಡರು ಬೆಳ್ಳಿತೆರೆಯ ಮೇಲೆ ಮೂಡಿಸುವ ಸ್ತುತ್ಯಾರ್ಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಅವರ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.   ಆದಿಚುಂಚನಗುರಿ ಮಠದ ಸೋಮೇಶ್ವರ ಸ್ವಾಮೀಜಿ ಕ್ಲಾಪ್ ಮಾಡಿದರು. ಬಳಿಕ ಆಶೀರ್ವಚನ ನೀಡಿ ಹೂವಿನ ಹಾರ ಚಿತ್ರಕ್ಕೆ ಕುವೆಂಪು ಅವರ ಪ್ರತಿಮೆಗೆ ಹಾರ ಹಾಕಿ ಗೌರವ ಅರ್ಪಿಸುವ ಮೂಲಕ ಕ್ಲಾಪ್ ಮಾಡಲಾಗಿದೆ. ಸಿದ್ದೇಗೌಡರು ಅನೇಕ ವೈವಿಧ್ಯಮಯ ಚಿತ್ರಗಳನ್ನು ನೀಡಿದವರು. ಸಮಾಜದ ತಪ್ಪುಗಳನ್ನು ತಿದ್ದಿತೀಡುವ ಕೆಲಸವನ್ನು ಚಿತ್ರದ ಮೂಲಕ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.  ನಿರ್ದೇಶಕ ಸಿದ್ದೇಗೌಡ ಮಾತನಾಡಿ ಈ ಚಿತ್ರದಲ್ಲಿ ವಿಲನ್ ಪಾತ್ರವಿಲ್ಲ. ಕಾಲಘಟ್ಟವೇ ಕಥೆಯನ್ನು ವಿವರಿಸಲಿದೆ. ಭಾರತದ ಚಿತ್ರರಂಗದಲ್ಲಿಯೇ ಹೊಸ ಪ್ರಯೋಗವಾಗಿದ್ದು, ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗಬಹುದೇನೋ ಎಂದರು. ಚಿತ್ರಕಥೆ ಪ್ರೇಕ್ಷಕರನ್ನು ರಂಜಿಸಲಿದೆ. ಹೆಚ್.ಕುಮಾರ್ ಮಂಡ್ಯ ನಮ್ಮ ಜೊತೆ ಕೈಜೋಡಿಸಿದ್ದಾರೆ. ಮಹಾನ್ ವ್ಯಕ್ತಿಯ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಚಾಲನೆ ನೀಡಲಾಗಿದೆ. ನಮ್ಮ ಎಲ್ಲಾ ಚಿತ್ರಗಳಲ್ಲೂ ಹೊಸತನವೇ ತುಂಬಿದ್ದು, ಈ ಬಾರಿ ಹೊಸತನಕ್ಕೇ ಕೈಹಾಕಿದ್ದೇವೆ. ಪ್ರೇಕ್ಷಕರನ್ನು ತಪುಪುವಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನರಸಮ್ಮ ಬೋರೇಗೌಡ ಕ್ಯಾಮರಾ ಆನ್ ಮಾಡಿದರು. ಈ ಸಂದರ್ಭ ಖ್ಯಾತ ವಿದ್ಯಾಂಸ ಪ್ರೊ.ಕೆ.ಭೈರವ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: