ದೇಶಮನರಂಜನೆ

‘ಬ್ಲಾಕ್​ಮೇಲ್’​ ಸಿನಿಮಾ ನೋಡಿದ ಬಿಗ್ ಬಿ​: ರಿಲೀಸ್ ಮೊದಲೇ ಹಿಟ್​ ಆದ ಸಿನಿಮಾ

ನವದೆಹಲಿ,ಏ.04:  ನಟ ಇರ್ಫಾನ್   ಅಭಿನಯದ ಬ್ಲಾಕ್​ಮೇಲ್ ಸಿನಿಮಾ ನೋಡಿದ ಬಿಗ್ ಬಿ ಅಮಿತಾಭ್ ಟ್ವಿಟರ್ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ‘ಪೀಕು’ ಸಿನಿಮಾದಲ್ಲಿ ಅಮಿತಾಭ್​ ನಟ ಇರ್ಫಾನ್ ಜೊತೆ  ತೆರೆ ಹಂಚಿಕೊಂಡಿದ್ದರು. ಆದರೆ ಇರ್ಫಾನ್​ ಅಮಿತಾಭ್​ ಅವರಿಗೆ ತನ್ನ ಹೊಸ ಸಿನಿಮಾವನ್ನು ತೋರಿಸಬೇಕೆಂದು ತುಂಬಾ ಆಸೆಪಟ್ಟಿದ್ದರಂತೆ. ಆದರೆ ಈಗ ಈ ಸಿನಿಮಾದ ನಿರ್ಮಾಪಕ ಬಿ-ಟೌನ್​ನ ತಾರೆಗಳಿಗೆ ಹಾಗೂ ದೊಡ್ಡ ವ್ಯಕ್ತಿಗಳಿಗೆಂದೇ ಬ್ಲಾಕ್​ಮೇಲ್​ ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು.

ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದ ಅಮಿತಾಭ್​ ತಮ್ಮ ಟ್ವಿಟರ್​ನಲ್ಲಿ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ. ಸಿನಿಮಾದ ಪ್ರತಿಯೊಂದು ಭಾಗವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ‘ಇವತ್ತು ನೋಡಿದ ಸಿನಿಮಾ ಬ್ಲಾಕ್​ಮೇಲ್​ ನಿಜಕ್ಕೂ ಚೆನ್ನಾಗಿದೆ. ವಿಭಿನ್ನ ಕಥೆ, ಉತ್ತಮವಾದ ಸ್ಕ್ರೀನ್​ಪ್ಲೇ, ಸಂಕಲನ ಹಾಗೂ ಇರ್ಫಾನ್​ ಅವರಿಂದ ಹಿಡಿದು ಹೊಸ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇಂತಹ ಕ್ರಿಯಾತ್ಮಕ ಸಿನಿಮಾ ನೋಡಿ ತುಂಬಾ ಖುಷಿಯಾಗಿದೆ’  ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. (ವರದಿ: ಪಿ.ಎಸ್)

 

Leave a Reply

comments

Related Articles

error: