ಮನರಂಜನೆ

ಮಾಸ್ಟರ್ ಆನಂದ್ ಈಗ ಆರ್ ಜೆ.!

ಬೆಂಗಳೂರು,ಏ.4-ಬಾಲ್ಯದಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಈಗ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ ಆರ್ ಜೆಯಾಗಿ ಪ್ರೇಕ್ಷಕರ ಮನಗೆಲ್ಲಲು ಮುಂದಾಗಿದ್ದಾರೆ.

`ನಮ್ ರೇಡಿಯೋ’ ದಲ್ಲಿ ಆನಂದ್ ಆರ್ ಜೆಯಾಗಿ ಹೊಸ ಶೋವೊಂದನ್ನು ನಡೆಸಿಕೊಡಲಿದ್ದಾರೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ಆರ್ ಜೆ ಆಗಲು ಖುಷಿಯಿಂದ ಆನಂದ್ ಒಪ್ಪಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಎಂದಾಕ್ಷಣ ನೆನಪಾಗುವುದು ಕಾಮಿಡಿ. ಅದೇ ಕಾರಣದಿಂದ ಕಾರ್ಯಕ್ರಮ ಕೂಡ ಕಾಮಿಡಿ, ಫನ್ ಅಂಶಗಳನ್ನು ಒಳಗೊಂಡಿದೆಯಂತೆ.

ಕೇಳುಗರಿಗೆ ಶೇ.100 ರಷ್ಟು ಮನರಂಜನೆ ನೀಡುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಶುರು ಮಾಡಲಾಗುತ್ತಿದೆ. ಕಾರ್ಯಕ್ರಮವನ್ನು ವಿಭಿನ್ನ ರೀತಿಯಾಗಿ ಪ್ಲಾನ್ ಮಾಡುತ್ತಿದ್ದು, 10-15 ದಿನಗಳಲ್ಲಿ ಹೊಸ ಶೋ ಶುರು ಆಗಲಿದೆ. ಹಿಂದೆನಮ್ ರೇಡಿಯೋದಲ್ಲಿ ಹೊಸ ವರ್ಷದ ವಿಶೇಷವಾಗಿ ಆನಂದ್ ಒಂದು ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಬಹುದೊಡ್ಡ ಪ್ರತಿಕ್ರಿಯೆ ದೊರಕಿತ್ತು.

ಬಿ.ಬಿ.ಸಿ ರೀತಿಯ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ತರುವ ಹೊಸ ಕಾನ್ಸೆಪ್ಟ್ ಗಳನ್ನು ಮೊದಲ ಬಾರಿಗೆ ಕನ್ನಡಕ್ಕೆನಮ್ ರೇಡಿಯೋ ಮೂಲಕ ತರುತ್ತಿದೆಂತೆ. ಶೋ ಪ್ರತಿ ದಿನ ಪ್ರಸಾರ ಆಗಲಿದ್ದು, ಶೋನ ಹೆಸರು ಸಮಯವನ್ನು ಇನ್ನು ನಿಗದಿ ಮಾಡಿಲ್ಲ. ಸದ್ಯ ಶೋನ ಪ್ಲಾನ್ ನಡೆಯುತ್ತಿದೆ.

ಮಾಸ್ಟರ್ ಆನಂದ್ ಸದ್ಯಕ್ಕೆ ಕಾಮಿಡಿ ಕಿಲಾಡಿಗಳು-2 ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದು, ನಿಗೂಢ ರಾತ್ರಿಧಾರಾವಾಹಿಯ ನಿರ್ದೇಶನವನ್ನು ಮಾಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: