ಮೈಸೂರು

ಕೀಳನಪುರ : ಹಳ್ಳಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು : ಪಿ.ಶಿವಶಂಕರ್

ಮೈಸೂರು ತಾಲೂಕು ಕೀಳನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಪ್ರೋ ಕಂಪನಿಯ ಸಹಕಾರದೊಂದಿಗೆ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು 12 ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದು, ಮಂಗಳವಾರ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಉದ್ಘಾಟಿಸಿದರು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಪಿ.ಶಿವಶಂಕರ್ ಸರ್ಕಾರಿ ಸಂಸ್ಥೆಗಳೊಂದಿಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ನಿಜಕ್ಕೂ ಶ್ಲಾಘನೀಯ ಎಂದರು. ಶಾಲೆಗಳಲ್ಲಿ ನಿರ್ಮಾಣ ಮಾಡಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

ಬಳಿಕ ನಡೆದ ಜನ ಸಂಪರ್ಕ ಸಭೆಯಲ್ಲಿ ಜನರು ತಮ್ಮ ಹಳ್ಳಿಗಳ ಸಮಸ್ಯೆಯನ್ನು ವಿವರಿಸಿದರು. ಎಲ್ಲವನ್ನು ಆಲಿಸಿದ ಶಿವಶಂಕರ್ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಕಾರ್ಯಕ್ರಮದ ಬಳಿಕ ಶೌಚಾಲಯಗಳ ನಿರ್ಮಾಣ ಹಾಗೂ ಅದರ ಬಳಕೆ ಕುರಿತು ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕೀಳನಪುರ ಗ್ರಾಮಪಂಚಾಯತಿ ಅಧ್ಯಕ್ಷೆ ರಾಜಮ್ಮ, ಜಿಪಂ ಸದಸ್ಯೆ ಕೆ.ವೈ ಭಾಗ್ಯ, ಸಿಸಿಎಲ್‍ಜಿ ವಿಪ್ರೋ ಎಂಪ್ಲಾಯ್ ರಿಲೇಷನ್ ಉಪಾಧ್ಯಕ್ಷ ಪ್ರಮೋದ್ ಮಹಾತ್ಮೆ, ವ್ಯವಸ್ಥಾಪಕ ಸುಶೀಲ್.ಕೆ.ರೈನಾ, ವಿಪ್ರೋ ಮಾನವ ಸಂಪನ್ಮೂಲ ವಿಭಾಗ ವ್ಯವಸ್ಥಾಪಕ ಭೂಪಾಲ್ ಕೃಷ್ಣ ಅರಸ್, ಕೀಳನಪುರ ಶಾಲೆಯ ಮುಖ್ಯೋಪಾಧ್ಯಾಯರು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: