Uncategorized

ಜಿಡ್ಡುಯುಕ್ತ ಮೀನು ಸೇವನೆ ಮಧುಮೇಹಿಗಳ ಅಂಧತ್ವ ನಿವಾರಣೆಗೆ ಸಹಕಾರಿ

ಜಿಡ್ಡುಯುಕ್ತ ಮೀನು ಸೇವನೆ ಮಾಡುವುದರಿಂದ ಮಧುಮೇಹಿಗಳಲ್ಲಿ ತಲೆದೋರುವ ಅಂಧತ್ವ ಸಮಸ್ಯೆ ನಿವಾರಿಸಬಹುದು ಎಂದು ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯಿಂದ ಗೊತ್ತಾಗಿದೆ.

ಈ ಸಮಸ್ಯೆ ಮಧ್ಯವಯಸ್ಕರು ಮತ್ತು ವೃದ್ಧರನ್ನು ಹೆಚ್ಚಾಗಿ ತಲೆದೋರುತ್ತದೆ. ವಿಶ್ವದ ವಿವಿಧ ದೇಶಗಳಲ್ಲಿ ಡಯಾಬಿಟಿಕ್ ರೆಟಿನೋಪತಿ ಒಂದು ಪಿಡುಗಾಗಿ ಕಾಡುತ್ತಿದೆ. ಈ ತೊಂದರೆಯಿಂದ ಕಣ್ಣುಗಳ ಹಿಂದಿನ ರಕ್ತನಾಳಗಳಿಗೆ ಹಾನಿಯಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ವಾರಕ್ಕೆರಡು ಸಲ ಈ ರೀತಿಯ ಮೀನುಗಳನ್ನು ಸೇವಿಸುವುದರಿಂದ ಕಣ್ಣುಗಳ ರೆಟಿನಾ ಸಂರಚನೆಯಲ್ಲಿ ಮುಖ್ಯ ಜೀವಕಣವಾದ ‘ಒಮೇಗಾ-3 ಪಾಲಿಅನ್‍ಸ್ಯಾಚುರೇಟೆಡ್’ ರಾಸಾಯನಿಕ ಲಭಿಸುತ್ತದೆ ಎಂಬುದು ವಿಜ್ಞಾನಿಗಳ ವಿವರಣೆ.

Leave a Reply

comments

Related Articles

error: