ಪ್ರಮುಖ ಸುದ್ದಿಮೈಸೂರು

ಕೆಎಸ್ಒಯು ಹಣಕಾಸು ಅವ್ಯವಹಾರ ಪ್ರಕರಣ, ಎಫ್ಐಆರ್ ರದ್ದುಗೊಳಿಸಲ್ಲ: ಹೈಕೋರ್ಟ್

prof-ks-rangappaಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹಾಗೂ ಇತರ ಏಳು ಮಂದಿ ವಿರುದ್ಧದ ಎಫ್ಐಆರ್ ರದ್ದುಗೊಳಿಸುವುದಿಲ್ಲ ಎಂದು ಮಂಗಳವಾರದಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮ್ಮ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಪ್ರೊ. ರಂಗಪ್ಪ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ನ್ಯಾ. ಆನಂದ್ ಬೈರಾರೆಡ್ಡಿ ಅವರು ವಜಾಗೊಳಿಸಿದ್ದಾರೆ. ಎಫ್ಐಆರ್ ಗೆ ನೀಡಿದ್ದ ತಡೆಯಾಜ್ಞೆಯನ್ನು ತೆಗೆದುಹಾಕಿ ಮುಂದಿನ ತನಿಖೆಗೆ ಆದೇಶಿಸಿದ್ದಾರೆ.

ರಂಗಪ್ಪ ಸೇರಿ ಇತರ ಏಳು ಮಂದಿಯ ವಿರುದ್ಧ ಕೆಎಸ್ಒಯು ಹಣಕಾಸು ಅಧಿಕಾರಿ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಜ್ಯಪಾಲ ವಜೂಬಾಯಿ ವಾಲಾ ಅವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಡಾ. ಭಕ್ತವತ್ಸಲ ಅವರನ್ನು ಈ ಪ್ರಕರಣ ತನಿಖೆ ನಡೆಸುವಂತೆ ನೇಮಿಸಿದ್ದರು. ಅವ್ಯವಹಾರ ನಡೆದಿರುವುದು ನಿಜ ಎಂದು  ಭಕ್ತವತ್ಸಲ ಅವರು ವರದಿ ನೀಡಿದ ಮೇರೆಗೆ ರಾಜ್ಯಪಾಲರ ಆದೇಶದಂತೆ ಎಫ್ಐಆರ್ ದಾಖಲಿಸಲಾಗಿತ್ತು.

Leave a Reply

comments

Related Articles

error: