ಮೈಸೂರು

ಸಮಾಜದಲ್ಲಿ ಗಂಡು-ಹೆಣ್ಣು ಎರಡೇ ಜಾತಿ : ಪ್ರೊ.ಕೆ.ಎಲ್.ಪುಟ್ಟಬುದ್ಧಿ

ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಎರಡೇ ಜಾತಿಗಳಿವೆ. ಮೇಲು-ಕೀಳು ಜಾತಿಗಳಿವೆ ಎನ್ನುವುದು ನಮ್ಮ ತಪ್ಪು ಕಲ್ಪನೆ ಎಂದು ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಕೆ.ಎಲ್.ಪುಟ್ಟಬುದ್ಧಿ ತಿಳಿಸಿದರು.

ಮೈಸೂರಿನ ವಾಣಿ ವಿಲಾಸ ರಸ್ತೆಯಲ್ಲಿರುವ ಜೆ.ಎಸ್.ಎಸ್.ಪ್ರಸಾದ ನಿಲಯದಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕ, ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ದತ್ತಿ, ನಾಟಕ ರತ್ನ ಅಂಕಪ್ಪನವರ ದತ್ತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಂತರಜಾತಿ ವಿವಾಹ ಸ್ವಸ್ಥ ಸಮಾಜಕ್ಕೆ ಸಹಕಾರಿ ಎಂಬ ಚರ್ಚಾ ಸ್ಪರ್ಧೆಯನ್ನು ಕೆ.ಎಲ್.ಪುಟ್ಟಬುದ್ಧಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮಿಬ್ಬರು ಮಕ್ಕಳು ಅಂತರ್ಜಾತಿ ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ ಎಂದರು. ಜಾತಿ ಎಂಬುದು ನಮ್ಮ ಕಲ್ಪನೆಯಷ್ಟೇ. ಗಂಡು-ಹೆಣ್ಣು ಬಿಟ್ಟು ಪ್ರಕೃತಿಯಲ್ಲಿ ಬೇರೆ ಜಾತಿಗಳಿಲ್ಲ ಎಂದರು.

ಶ್ರೀಶಿವರಾತ್ರೀಶ್ವರ ಅಕ್ಕನ ಬಳಗದ ಅಧ್ಯಕ್ಷೆ ಎಂ.ಎ.ನೀಲಾಂಬಿಕಾ ಅವರ ‘ನೆನಪಿನ ಅಂಗಳ’ದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ, ಜೆ.ಎಸ್.ಎಸ್.ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: