ಮೈಸೂರು

ಒಕ್ಕಲಿಗ ಮತದಾರ ಕೈ ಕೋಡೊ ಭೀತಿ ಹಿನ್ನೆಲೆ ನಾಳೆ ಒಕ್ಕಲಿಗ ಸಮುದಾಯ ಸಭೆ ನಡೆಸಲಿದ್ದಾರಂತೆ ಸಿದ್ದರಾಮಯ್ಯ

ಮೈಸೂರು,ಏ.5:- ಪುತ್ರನಿಗಾಗಿ ವರುಣಾ ಕ್ಷೇತ್ರ  ಬಿಟ್ಟುಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ ಕಸಿವಿಸಿಯುಂಟಾಗಿದ್ದು, ತಾನು ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.  ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಎರಡನೇ ಹಂತದ ಪ್ರವಾಸ ನಡೆಸಲಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ನಡೆಸುತ್ತಿದ್ದು, ಒಕ್ಕಲಿಗ ಮತಗಳ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಇಂದು ಸಂಜೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಲಿದ್ದಾರೆ ಎನ್ನಲಾಗಿದ್ದು, ನಾಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಸಭೆ ನಡೆಸಲಿದ್ದಾರೆ. ಖಾಸಗಿ ಸಮುದಾಯ ಭವನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಸಭೆ ನಡೆಯಲಿದ್ದು, ಈ ಬಾರಿ ಚುನಾವಣೆಯಲ್ಲಿ ಒಕ್ಕಲಿಗ ಮತದಾರ ಸಿದ್ದರಾಮಯ್ಯನವರಿಗೆ ಕೈ ಕೋಡೊ ಭೀತಿ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಒಕ್ಕಲಿಗ ಸಮುದಾಯದ ಮತಗಳ ಕ್ರೋಢೀಕರಣಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದು, ಒಕ್ಕಲಿಗ ಸಮುದಾಯ ಕೈ ಕೊಟ್ಟರೆ ಸಿದ್ದರಾಮಯ್ಯವರಿಗೆ  ಸೋಲುಂಟಾಗಲಿದ್ದು, ಭೀತಿ ಎದುರಾಗಿದೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯನವರ ನಿದ್ದೆಗೆಡಿಸಿದ್ದು, ರಾಜಕೀಯ ಮರು ಹುಟ್ಟು ನೀಡಿದ ಕ್ಷೇತ್ರದಿಂದಲೇ ಸಿಎಂ ರಾಜಕೀಯ ಅಂತ್ಯಕ್ಕೆ ವಿರೋಧಿ ಪಡೆಗಳು ಕಾದಿವೆ. ಇದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಸಿದ್ದರಾಮಯ್ಯನವರು ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: