ಕರ್ನಾಟಕಮನರಂಜನೆ

ಕನ್ನಡಿಗರಲ್ಲಿ ಆರ್‌ಜೆ ರಶ್ಮಿ ಕ್ಷಮೆಯಾಚನೆ

ಬೆಂಗಳೂರು,ಏ.05: ರಾಜರಥ ತಂಡ ಸಂದರ್ಶನದ ವೇಳೆ ಮಾತನಾಡಿದ ಪದಗಳಿಂದ ಕನ್ನಡಿಗರ ಮನಸಿಗೆ ನೋವಾಗಿರುವ ಕಾರಣ ಆರ್‌ಜೆ ರಶ್ಮಿ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.

ಚಿತ್ರ ತಂಡ ಬಳಸಿದ ಪದಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದೆ. ಪ್ರತಿ ದಿನ ಒಂದೊಂದು ತಿರುವು ಪಡೆದುಕೊಂಡು ಕನ್ನಡಿಗರಿಗೆ ಬೇಸರ ಉಂಟು ಮಾಡಿದೆ. ಈ ಹಿನ್ನೆಲೆ ಚಲನ ಚಿತ್ರ ವಾಣಿಜ್ಯ ಮಂಡಳಿಯ ಸಾರಾ ಗೋವಿಂದ್ ಅವರನ್ನು  ಭೇಟಿಮಾಡಿ ನಮ್ಮ ಕಾಯಕ್ರಮದಿಂದ ಕನ್ನಡಿಗರಿಗೆ ನೋವಾಗಿದೆ ನಮ್ಮ ಕಡೆಯಿಂದ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ರೀತಿ ಘಟನೆಗಳಿಗೆ ಅವಕಾಶ ಮಾಡಿಕೊಡವುದಿಲ್ಲ ಎಂದು ಭರವಸೆ ನೀಡಿ ಕ್ಷಮೆಯಾಚಿಸಿದ್ದಾರೆ. .

ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವಂತಹ ಕಾರ್ಯಕ್ರಮಗಳನ್ನು ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಮ್ಮ ಕಾರ್ಯಕ್ರಮಕ್ಕೆ ಬಹಳಷ್ಟು ಚಿತ್ರ ತಂಡದವರು ಬಂದಿದ್ದಾರೆ. ಇನ್ನಮುಂದೆ ಕೂಡ ನಿಮ್ಮ ಸಹಕಾರ ಹೀಗೆ ಇರಲಿ. ನಮ್ಮ ಕಾರ್ಯಕ್ರಮದ ಉದ್ದೇಶ ಚಿತ್ರದ ಪ್ರಚಾರಕ್ಕಷ್ಟೇ ಸೀಮಿತ ವಾಗಿರುತ್ತದೆ ಎಂದು ಮತ್ತೊಮ್ಮೆ ಹೇಳಿ ಕನ್ನಡಿಗರಲ್ಲಿ ರಶ್ಮಿ ಅವರು ಕ್ಷಮಾಪಣೆ ಕೇಳಿದ್ದಾರೆ. ಸಾರಾ ಗೋವಿಂದ್ ಮಾತನಾಡಿ ಒಂದು ಹೆಣ್ಣು ಮಗಳು ಖುದ್ದು ಬಂದು ಮೊದಲ ಬಾರಿ ಆಗಿರುವ ತಪ್ಪಿಗೆ ಕ್ಷಮಾಪಣೆ ಕೇಳುತ್ತಿದ್ದಾರೆ. ಕನ್ನಡಿಗರು ಔದಾರ್ಯದಿಂದ ಕ್ಷಮಿಸಬೇಕೆಂದು ತಿಳಿಸಿದರು. (ವರದಿ: ಪಿ.ಎಸ್ )

Leave a Reply

comments

Related Articles

error: