ಮೈಸೂರು

ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಯಾವುದೇ ಕಾರಣಕ್ಕೂ ರಚನೆ ಮಾಡಬಾರದೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಏ.5:- ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ತಮಿಳುನಾಡು ಸರ್ಕಾರ ಒತ್ತಾಯ ಮಾಡುತ್ತಿರುವ ಕ್ರಮವನ್ನು ಹಾಗೂ ಇಂದು ಬಂದ್ ಮಾಡಿರುವ ಕ್ರಮವನ್ನು ಖಂಡಿಸಿ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರಚಿಸಬಾರದೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಕೆ.ಆರ್.ಎಸ್, ಹಾರಂಗಿ, ಹೇಮಾವತಿ, ಕಬಿನಿ, ಕಾವೇರಿ ನದಿಗಳು ನಮ್ಮ ರಾಜ್ಯದ ಅವಿಭಾಜ್ಯ ಅಂಗಗಳು. ಈ ನದಿಗಳನ್ನು ತಮಿಳುನಾಡು ತಮ್ಮ ಸ್ವಾಧೀನಕ್ಕೆ ಪಡೆಯಲು ಬಂದ್ ಮಾಡಿ ಹೋರಾಟ ಮಾಡುತ್ತಿರುವುದು ಅತ್ಯಂತ ಖಂಡನೀಯ. ಹೆಚ್ಚು ಕಡಿಮೆ ಶೇ.80ರಷ್ಟು ಕಾವೇರಿ ನೀರು ತಮಗೇ ಸಲ್ಲಬೇಕು ಎಂಬುದು ತಮಿಳುನಾಡಿನ ಹುಚ್ಚು ಆಗ್ರಹವಾಗಿದೆ. ಕಳೆದ 2-3ವರ್ಷಗಳಿಂದ ಕರ್ನಾಟಕದಲ್ಲಿ ಮಳೆಯ ನೀರಿನ ಕೊರತೆ ಉಂಟಾಗಿದೆ. ನಮ್ಮ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಕಾವೇರಿ ಜಲಾಶಯದ 4ಅಣೆಕಟ್ಟೆಗಳ ಸಂಪೂರ್ಣ   ನಿರ್ವಹಣೆ ಕೇಂದ್ರ ರಚಿಸುವ ಮಂಡಳಿಯ ಅಧೀನಕ್ಕೆ ಬರಲಿದೆ. ನಮ್ಮ ರಾಜ್ಯದ ರೈತರಿಗೆ ಬೆಳೆಬೆಳೆಯಲು ನೀರು ತರಿಸಲು ಕೂಡ ಮಂಡಲಿಯ ಒಪ್ಪಿಗೆ ಬೇಕು. ರಾಜ್ಯದ ಜನರಿಗೆ ಕುಡಿಯುವ ನೀರಿಗೂ ಕೇಂದ್ರದ ಭಿಕ್ಷೆ ಬೇಕು. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬಾರದೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಜೀಶ್, ಪಿ.ಶಾಮತಮೂರ್ತಿ, ಸುನಿಲ್ ಕುಮಾರ್, ಜಗದೀಶ್, ನಂಜುಂಡಸ್ವಾಮಿ, ಗುರುಮಲ್ಲಪ್ಪ, ಮಿನಿಬಂಗಾರಪ್ಪ, ರಾಧಾಕೃಷ್ಣ, ಬಾಬು, ರಾಕೇಶ್, ಸುಪ್ರೀತ್,ತಿಪ್ಪಯ್ಯ, ಶರತ್ ರಾಜೇ ಅರಸ್, ಹರೀಶ್, ಮೂರ್ತಿ, ನಿತ್ಯಾನಂದ, ದೀಪಕ್, ಅರ್ಜುನ್, ನಾಸೀರ್, ಶಬೀರ್, ಆನಂದ್, ಅಕ್ಷಯ್ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: