ಮೈಸೂರು

ಕೆಲಸದಿಂದ ತೆಗೆದಿರುವ ಎಲ್ಲಾ 61ಜನ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಏ.5:- ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಬಿಎಸ್ ಎನ್ ಎಲ್ ನಾನ್ ಪರ್ಮನೆಂಟ್ ನೌಕರರ ಸಂಘ ಪ್ರತಿಭಟನೆ ನಡೆಸಿತು.

ಜಯಲಕ್ಷ್ಮಿಪುರಂನ ಬಿಎಸ್ ಎನ್ ಎಲ್ ಕಚೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಏಪ್ರಿಲ್ 1,2018ರಿಂದ ಮೈಸೂರು ಮತ್ತು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 60 ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿರುವುದು ಸರಿಯಲ್ಲ. ಸಂಘಟನೆಯ ಪದಾಧಿಕಾರಗಳು ಮತ್ತು ಮುಖಂಡರನ್ನು ಬೇಕಂತಲೇ ತೆಗೆದು ಹಾಕಿದ್ದಾರೆ. ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಕೆಲ ಕಾರ್ಮಿಕರು ಬೇಡ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಇದು ದ್ವೇಷದ ಕ್ರಮವಾಗಿದೆ. ಜೊತೆಗೆ ಕೆಲಸದಿಂದ ತೆಗೆದುಹಾಕುವಾ್ ಜೂನಿಯರ್ ಗಳನ್ನು ಕೆಲಸದಿಂದ ತೆಗೆಯಬೇಕೆಂಬ ಕಾನೂನು ಇದ್ದರೂ ಆ ಕಾನೂನುಗಳನ್ನು ಮೀರಿ ಸಂವಿಧಾನವನ್ನು ಉಲ್ಲಂಘಿಸಿ ಸೀನಿಯರ್ ಗಳನ್ನು ಕೆಲಸದಿಂದ ಕೆಲಸದಿಂದ ತೆಗೆದಿರುವುದು ಸರಿಯಲ್ಲ. ಕೂಡಲೇ ಕೆಲಸದಿಂದ ತೆಗೆದಿರುವ ಎಲ್ಲಾ 61ಜನ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಮತ್ತು ಗುತ್ತಿಗೆ ಕಾರ್ಮಿಕರ ಮೇಲೆ ಯಾವುದೇ ದ್ವೇಷದ ಕ್ರಮ ಕೈಗೊಳ್ಳಬಾರದು, ಯಾರನ್ನೂ ಕೆಲಸದಿಂದ ತೆಗೆಯಬಾರದೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಮಲಿಂಗು, ಮಹೇಂದ್ರ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: