
ಮೈಸೂರು
ಅಕ್ರಮ ಮರಳು ಗಣಿಗಾರಿಕೆ: ವಿಚಾರಣೆ ಡಿಸೆಂಬರ್ 28ಕ್ಕೆ
ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್, ಅಕ್ರಮ ಮರಳು ಸಾಗಾಣಿಕೆಗೆ ಲಂಚ ಪಡೆಯಲು ಸರ್ಕಾರಿ ಅಧಿಕಾರಿಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 28ಕ್ಕೆ ಮುಂದೂಡಲಾಗಿದೆ.
ಮೈಸೂರು ಜಿಲ್ಲೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ, ಸುನಿಲ್ ಸ್ನೇಹಿತ ಎಂದು ಹೇಳಲಾದ ಪ್ರಕರಣದ ಮತ್ತೋರ್ವ ಆರೋಪಿ ರಾಜು ಪರ ವಕೀಲ ಮಹೇಶ್ ಅವರು ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ತಡೆಯಾಜ್ಞೆ ವಿಸ್ತರಿಸಿರುವುದರ ಕುರಿತು ನ್ಯಾಯಾಲಯ ದಾಖಲೆ ಕೇಳಲಾಗಿ ದಾಖಲೆಗಳನ್ನು ನೀಡಲು ವಕೀಲ ಮಹೇಶ್ ಕಾಲಾವಕಾಶಕ್ಕಾಗಿ ಮನವಿ ಮಾಡಿಕೊಂಡರು.
ಈ ಕುರಿತು ದಾಖಲೆ ನೀಡುವಂತೆ ಸೂಚಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 28ಕ್ಕೆ ಮುಂದೂಡಿದರು.