ಮೈಸೂರು

ತಮಿಳುನಾಡು ಬಂದ್ ಹಿನ್ನಲೆ : ಮೈಸೂರು-ತಮಿಳುನಾಡು ಬಸ್ ಸಂಚಾರ ಸ್ಥಗಿತ

ಮೈಸೂರು,ಏ.5:- ಇಂದು ತಮಿಳುನಾಡು ಬಂದ್ ಹಿನ್ನಲೆಯಲ್ಲಿ  ಮೈಸೂರು-ತಮಿಳುನಾಡು ಬಸ್ ಸಂಚಾರ ಸ್ಥಗಿತಗೊಂಡಿದೆ.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಬಂದ್ ಕರೆ ನೀಡಿದ್ದು, ಮೈಸೂರಿನಿಂದ ತಮಿಳುನಾಡಿಗೆ ತೆರಳುವ ಎಲ್ಲಾ  ಕೆ ಎಸ್ ಆರ್ ಟಿ ಸಿ ಬಸ್ ನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರತಿನಿತ್ಯ 70ಟ್ರಿಪ್ ನಲ್ಲಿ ಗಂಟೆಗೆ 4ಬಸ್ ಗಳು ತಮಿಳುನಾಡಿಗೆ ತೆರಳುತ್ತಿದ್ದವು. ಇಂದು ಬೆಳಿಗ್ಗೆಯಿಂದಲೇ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.  ಬಸ್ ಸ್ಥಗಿತ ಹಿನ್ನೆಲೆಯಲ್ಲಿ ಮೈಸೂರಿನ ಸಬರ್ಬ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು  ಪರದಾಡುವಂತಾಯಿತು. ಇಂದು ಸಂಜೆ6 ಗಂಟೆಯ ತನಕ ತಮಿಳುನಾಡು ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: