ಮೈಸೂರು

ಚುನಾವಣಾ ಹಿನ್ನೆಲೆ : ಹದ್ದಿನ ಕಣ್ಣಿರಿಸಿದ ಚುನಾವಣಾ ಆಯೋಗ; ಅಧಿಕಾರಿಗಳಿಂದ ವಾಹನ ತಪಾಸಣೆ

ಮೈಸೂರು,ಏ.5:- ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಾದ್ಯಂತ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ.

ಜಿಲ್ಲೆಯಾದ್ಯಂತ ಇರುವ 49 ಚೆಕ್ ಪೋಸ್ಟ್  ಗಳಲ್ಲಿ  ಕಣ್ಗಾವಲಿರಿಸಲಾಗಿದ್ದು, ಒಂದೊಂದು ಚೆಕ್ ಪೋಸ್ಟ್ ಗಳಲ್ಲಿ ಕಂದಾಯ, ಅಬಕಾರಿ, ಪೊಲೀಸ್ ಇಲಾಖೆ ಸೇರಿದಂತೆ ಸೆಕ್ಟರ್ ಅಧಿಕಾರಿಗಳು ಮತ್ತು  ಚುನಾವಣಾ ಪರಿವೀಕ್ಷಣೆ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಅನುಮಾನ ಬಂದ ವಾಹನಗಳನ್ನು ಅಧಿಕಾರಿಗಳು ತೀವ್ರ ತಪಾಸಣೆ ನಡೆಸಲಿದ್ದಾರೆ. ದಿನದ 24 ತಾಸುಗಳ ಕಾಲ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ವಾಹನ ತಪಾಸಣೆ ನಡೆಸಲಿದ್ದಾರೆ.  ಒಟ್ಟು 93ಪರಿವೀಕ್ಷಣಾ ಚುನಾವಣಾಧಿಕಾರಿಗಳು, 201 ಸೆಕ್ಟರ್ ಅಧಿಕಾರಿಗಳು 49 ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಮದ್ಯ , ಹಣ ,ಸೇರಿದಂತೆ ಇತ್ಯಾದಿ  ವಸ್ತುಗಳನ್ನು ಸಾಗಣೆ ಮಾಡುವವರ ಮೇಲೆ ಹದ್ದಿನ ಕಣ್ಣಿರಿಸಲಾಗಿದ್ದು, ಅವೆಲ್ಲಕ್ಕೂ ಬ್ರೇಕ್ ಬೀಳಲಿದೆ. ಚೆಕ್ ಪೋಸ್ಟ್ ಗಳಲ್ಲಿ ಈಗಾಗಲೇ ತಪಾಸಣೆ ಆರಂಭವಾಗಿದ್ದು, ಮೇ 15ರವರೆಗೂ  ಚೆಕ್ ಪೋಸ್ಟ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: