ಮೈಸೂರು

ಮಹಿಳೆಯ ಚಿನ್ನಾಭರಣ ಕಳವು

ಚಾಮುಂಡಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಆಗಮಿಸಿದ್ದ ಮಹಿಳೆಯ ಚಿನ್ನಾಭರಣ ಮಂಗಳವಾರ ಕಳವಾಗಿದೆ. ವಿಶಾಖಪಟ್ಟಣ ನಿವಾಸಿ ಸಬೀತಾ ಚಿನ್ನ ಕಳೆದುಕೊಂಡವರು.

ಸಬೀತಾ ಅವರು ತಮ್ಮ ವ್ಯಾನಿಟಿ ಬ್ಯಾಗ್‍ನಲ್ಲಿ 58 ಗ್ರಾಂ ತೂಕದ ಚಿನ್ನಾಭರಣ ಇಟ್ಟುಕೊಂಡಿದ್ದರು. ದೇವರ ದರ್ಶನ ಮುಗಿಸಿ ಹೊರಬರುವಷ್ಟರಲ್ಲಿ ಕಳ್ಳರು ವ್ಯಾನಿಟಿ ಬ್ಯಾಗ್‍ನ ಜಿಪ್ ತೆರೆದು ಚಿನ್ನಾಭರಣ ಕಳವು ಮಾಡಿದ್ದಾರೆ. ಈ ಬಗ್ಗೆ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: