ಮನರಂಜನೆ

ದರ್ಶನ್ ಜೊತೆ ಅಭಿನಯಿಸಲು ಒಲ್ಲೆ ಎಂದ ನಟಿ

ಬೆಂಗಳೂರು,05: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಲು ಬಹುಭಾಷಾ ನಟಿ ಕೃತಿ ಕರಬಂಧ ಒಲ್ಲೆ ಎಂದಿದ್ದಾರಂತೆ.

ಕೃತಿ ಕರಬಂಧ ಈಗ ಸೌತ್ ಇಂಡಿಯಾ ಚಿತ್ರಗಳಲ್ಲಷ್ಟೆ ಅಲ್ಲ ಬಾಲಿವುಡ್‍ನಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ದರ್ಶನ್ ಅಭಿನಯಿಸುತ್ತಿರುವ `ಯಜಮಾನ’ ಸಿನಿಮಾದಿಂದ ಕೃತಿ ಗೆ ಆಫರ್ ಬಂದಿತ್ತು. ಯಜಮಾನ ತಂಡ ನೀಡಿದ್ದ ಡೇಟ್ ಕೃತಿಗೆ ಹೊಂದಿಕೆಯಾಗಿಲ್ಲವೆಂದು ಒಲ್ಲೆ ಎಂದಿದ್ದಾರೆ.

ಯಜಮಾನ ಚಿತ್ರದಲ್ಲಿ ಕೃತಿ ಬದಲು ಇದೀಗ ಟಾಲಿವುಡ್ ನಟಿ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಟಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: