ಮೈಸೂರು

ಏ.8ರಂದು ಹಾಡಿ ಹಬ್ಬ : ಆದಿವಾಸಿಗಳೊಂದಿಗೆ ಚಿಂತನ-ಮಂಥನ

ಮೈಸೂರು,ಏ.5 : ರಾಜ್ಯ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತವಾಗಿ ‘ಹಾಡಿ ಹಬ್ಬ’ ಆದಿವಾಸಿಗಳೊಂದಿಗೆ ಚಿಂತನ, ಮಂಥನ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಏ.8ರಂದು ಭೀಮನಹಳ್ಳಿ ಬಳಿಯಿರುವ ಕುಂಟೇರಿ ಹಾಡಿಯಲ್ಲಿ ಆಯೋಜಿಸಿದೆ.

.ಈ ಬಗ್ಗೆ ಕ.ರಾ.ಹಿಂ.ವ.ಜಾ.ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಸುದ್ದಿಗೋಷ್ಠಿಯಲ್ಲಿ ತಿಳಿಸಿ, ಆದಿವಾಸಿಗಳಿಗೆ ಉದ್ಯೋಗ-ಶಿಕ್ಷಣದಲ್ಲಿ ಶೇ.5ರಷ್ಟು ಪ್ರತ್ಯೇಕ ಮೀಸಲಾತಿ, ಹಾಡಿಗಳಲ್ಲಿ ಮೂಲಭೂತ ಸೌಲಭ್ಯ,ಮಂಜೂರಾದ ಜಮೀನುಗಳಿಗೆ ಖಾತೆ ನೋಂದಾಣಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಚರ್ಚಿಸಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಿದ್ದು, ಅಲ್ಲದೇ ಚುನಾವಣಾ ಬಹಿಷ್ಕರಿಸಿದ ಹಾಡಿ ಮಂದಿಯನ್ನು ಮನವೊಲಿಸೋ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದರು.

ಅಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮವನ್ನು ಚಿಂತಕ ಪ್ರೊ.ಕಾಳೇಗೌಡ ನಾಗವಾರ ಚಾಲನೆ ನೀಡಲಿದ್ದು, ಮೈವಿವಿ ಗಾಂಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಅಧ್ಯಕ್ಷತೆ ವಹಿಸುವರು.ಬುಡಕಟ್ಟು ಕಲಾತಂಡಗಳ ಪ್ರದರ್ಶನವನ್ನು ಕೆರೆ ಸಂರ್ಕಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಉದ್ಘಾಟಿಸುವರು, ಮೈವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನರೇಂದ್ರ ಕುಮಾರ್ ಆದಿವಾಸಿಗಳೊಮದಿಗೆ ಚಿಂತನ-ಮಂಥನ ನಡೆಸುವರು. ಕಾರ್ಯಕ್ರಮದಲ್ಲಿ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ಪ್ರಾಂಶುಪಾಲರಾದ ಕೆ.ಸಿ.ಮಹದೇವಶೆಟ್ಟಿ, ರಾಜ್ಯ ಲಲಿತಾ ಕಲಾ ಅಕಾಡೆಮಿ ಮಾಜಿ ಸದಸ್ಯ ಸಿ.ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿರುವರು.

ರಾಜ್ಯ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ ಅಧ್ಯಕ್ಷ ಬಸಪ್ಪ ಲಿಂಗಾಪುರ, ಕಾರ್ಯದರ್ಶಿ ಎಸ್.ರವಿ ಅಣ್ಣೂರು ಹಾಡಿ, ಪದಾಧಿಕಾರಿ ಪ್ರಸಾದ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: