
ಮೈಸೂರು
ಏ.8ರಂದು ಡಾ.ಸಿ.ಪಿ.ಕೆಯವರ ಅಭಿನಂದನೆ : ಕೃತಿ ಬಿಡುಗಡೆ
ಮೈಸೂರು,ಏ.5 : ಹಿರಿಯ ಸಾಹಿತಿ ಡಾ.ಸಿ.ಪಿ.ಕೆಯವರ 79ರ ಅಭಿನಂದನೆ, ಕೃತಿ ಲೋಕಾರ್ಪಣೆ ಹಾಗೂ ಸರ್ವಜ್ಞ ಸಾಹಿತ್ಯ ಮಾಲೆಯ ಉದ್ಘಾಟನಾ ಸಮಾರಂಭವನ್ನು ಏ.8ರಂದು ಜೆಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರತಿಷ್ಠಾನದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಸಂಜೆ 4.30ಕ್ಕೆ ಮೈಸೂರು ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಜ್ಞಾನಯೋಗಾನಂದ ಅವರು ಚಾಲನೆ ನೀಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ. ಕೃತಿ ಕುರಿತು ಹಿರಿಯ ಸಾಹಿತಿಗಳಾದ ಡಾ.ಸಿ.ನಾಗಣ್ಣ, ಮತ್ತು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡುವರು ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಸಿ.ಪಿ.ಕೆಯವರ ಲೋಕಮಾತಾ ನಿವೇದಿತಾ, ಅಂಗೈಯಲ್ಲಿ ಅಲಂಕಾರಶಾಸ್ತ್ರ, ಅಂಗೈಯಲ್ಲಿ ಕುವೆಂಪು, ಅಂಗೈಯಲ್ಲಿ ಶ್ರೀ ರಾಮಯಣ ದರ್ಶನಂ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು ನಂತರ. ಅವರನ್ನು ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಸನ್ಮಾನಿಸಿ ಅಭಿನಂದಿಸುವರು ಎಂದು ತಿಳಿಸಿದರು.
ಪ್ರತಿಷ್ಠಾನದ ನಿರ್ದೇಶಕಿ ಪ್ರೊ.ಕಮಲಾ ಜೈನ್, ಸಂಚಾಲಕಿ ಯಶೋಧ ನಾರಾಯಣ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)