ಕರ್ನಾಟಕ

ಸಿಲಿಂಡರ್ ಸ್ಫೋಟ : 9 ಮಂದಿಗೆ ಗಂಭೀರ ಗಾಯ

ಬೆಂಗಳೂರು,ಏ.05 ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಒಂಬತ್ತು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪೀಣ್ಯ ಸಮೀಪದ ದಾಸರಹಳ್ಳಿಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.

ತುಮಕೂರು ಜಿಲ್ಲೆಯ ಪಾವಗಡ ಮೂಲದ ದೇವರಾಜು, ಲಕ್ಷ್ಮಮ್ಮ , ವೆಂಕಟೇಶ, ಮಹೇಶ್ವರಮ್ಮ, ಸೋಮಶೇಖರ, ಹೊನ್ನೂರಪ್ಪ, ನಿರಂಜನ್, ದೇವಿಕಾ, ಸಂಗೀತ ಘಟನೆಯಲ್ಲಿ ಗಾಯಗೊಂಡವರನ್ನು ಎಂದು ತಿಳಿದುಬಂದಿದೆ.

ರಾತ್ರಿ ಮಲಗುವ ಸಂದರ್ಭ ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಮಲಗಿದ್ದ ಕುಟುಂಬ ಈ ಸಂದರ್ಭ ಸಿಲಿಂಡರಿನಿಂದ ಗ್ಯಾಸ್ ಸೋರಿಕೆಯಾಗಿದೆ ಮುಂಜಾನೆ 4.30ಕ್ಕೆ ಎದ್ದು ಲೈಟ್ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ, ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ವರದಿ: ಪಿ.ಎಸ್ )

Leave a Reply

comments

Related Articles

error: