ಪ್ರಮುಖ ಸುದ್ದಿ

ಮಂಡ್ಯದಿಂದ ನಟ ರೆಬಲ್ ಸ್ಟಾರ್ ಅಂಬರೀಶ್ ಸ್ಪರ್ಧೆ ಖಚಿತ

ರಾಜ್ಯ(ಮಂಡ್ಯ)ಏ.5:- ಮಂಡ್ಯದಿಂದ ಹಾಲಿ ಶಾಸಕ ಹಾಗೂ ನಟ ರೆಬಲ್ ಸ್ಟಾರ್ ಅಂಬರೀಶ್ ಸ್ಪರ್ಧೆ ಬಗ್ಗೆ ಇದ್ದ ಅನುಮಾನಗಳಿಗೆ ತೆರೆಬಿದ್ದಿದ್ದು ಅಂಬರೀಶ್ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾಗಿದೆ.

ನಟ ಅಂಬರೀಶ್ ಶೀಘ್ರದಲ್ಲೇ ಮಂಡ್ಯಕ್ಕೆ ಬರಲಿದ್ದಾರೆ. ಮಾಜಿ ಸಚಿವ ಅಂಬರೀಶ್ ಸ್ಪರ್ಧೆ ಬಗ್ಗೆ ಅವರ ಬೆಂಬಲಿಗರು ಖಚಿತಪಡಿಸಿದ್ದಾರೆ. ಅಂಬಿ ಸ್ಪರ್ಧೆ ಕುರಿತು ಅಮರಾವತಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆ ಅಂಬರೀಶ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಟ ಅಂಬರೀಶ್ ಸಚಿವರಾಗಿ, ಶಾಸಕರಾಗಿ ಮಾಡಿರುವ ಸಾಧನೆಗಳ ಬಗ್ಗೆ ದಾಖಲೆ ಮಾಡಿರುವ ಕೈಪಿಡಿ ಮುದ್ರಣಕ್ಕೆ ಕಳುಹಿಸಲಾಗಿದ್ದು, ಶೀಘ್ರವಾಗಿ ಅಂಬಿ ಅಭಿವೃದ್ಧಿ ಕಾರ್ಯಗಳ ಕೈಪಿಡಿ ಬಿಡುಗಡೆಯಾಗಲಿದೆ.

ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿರುವ ಅಂಬರೀಶ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಿಂದ ಮಂಡ್ಯ ಜಿಲ್ಲೆಗೆ ಬಂದು ಜನಾಶೀರ್ವಾದ ಯಾತ್ರೆ ನಡೆಸಿದಾಗ ಬೆಂಗಳೂರಿನಲ್ಲಿದ್ದರೂ ಬಂದಿರಲಿಲ್ಲ. ಅವರ ಈ ನಡೆ ಅಚ್ಚರಿಗೆ ಕಾರಣವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: