ಸುದ್ದಿ ಸಂಕ್ಷಿಪ್ತ
ಏ.6ರಿಂದ ರೀಟ್ರೀಟ್ ಫಾರ್ ಮೆಡಿಕಲ್ ಸ್ಟೂಡೆಂಟ್ಸ್
ಮೈಸೂರು,ಏ.5 : ಸುತ್ತೂರಿನಲ್ಲಿ ಏ.6 ರಿಂದ 8ರವರೆಗೆ ರೀಟ್ರೀಟ್ ಫಾರ್ ಮೆಡಿಕಲ್ ಸ್ಟೂಡೆಂಟ್ಸ್ ಕಾರ್ಯಕ್ರಮವನ್ನು ಜಗದ್ಗುರು ಶ್ರೀ ವೀರಸಿಂಹಾನ ಮಹಾಸಂಸ್ಥಾನ ಮಠ, ಜೆಎಸ್ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರೀಶ್ವರಿ ದತ್ತಿ ನಿಧಿಯಿಂದ ಆಯೋಜಿಸಿದೆ.
ನಾಯಕತ್ವ ಗುಣಗಳು ಬಗ್ಗೆ ಡಾ.ಬಿ.ಸುರೇಶ್, ಸಮಾಜ ಸೇವೆ ಬಗ್ಗೆ ಡಾ.ಆರ್.ಬಾಲಸುಬ್ರಹ್ಮಣ್ಯಂ, ಆಧ್ಯಾತ್ಮ ಮತ್ತು ವ್ಯಕ್ತಿತ್ವ ವಿಕಸನ ಬಗ್ಗೆ ಸಿದ್ದೇಶ್ವರ ಸ್ವಾಮಿಗಳು ಉಪನ್ಯಾಸ ನೀಡುವರು, ಅದರಂತೆ ಡಾ.ಕೆ.ಜಾವೀದ್ ನಯೀಮ್, ಡಾ.ಪಿ.ಎ.ಕುಶಾಲಪ್ಪ, ಡಾ.ಎಂ.ದಯಾನಂದ, ಡಾ.ಬಿ.ಟಿ.ರುದ್ರೇಶ್ ಇನ್ನಿತರ ತಜ್ಞರು ಉಪನ್ಯಾಸ ನೀಡುವರು. (ಕೆ.ಎಂ.ಆರ್)