ಮೈಸೂರು

ಉಚಿತ ಶೌಚಾಲಯ ಸ್ಥಾಪನೆಗೆ ಗುದ್ದಲಿ ಪೂಜೆ

ಸಾರ್ವಜನಿಕರ ಮೂಲಭೂತ ಸೌಲಭ್ಯಗಳಿಗೆ ವಿಶೇಷ ಗಮನಹರಿಸಿರುವ ಮೈಸೂರು ನಗರಪಾಲಿಕೆಯೂ ನಗರದ ಹಲವಾರು ಸ್ಥಳಗಳಲ್ಲಿ ಮೂತ್ರಾಲಯಗಳನ್ನು ನಿರ್ಮಿಸಲು ಮುಂದಾಗಿದೆ.

ಸುಮಾರು 97/5 ಲಕ್ಷ ರೂ.ಗಳ ವೆಚ್ಚಗಳಲ್ಲಿ ನಗರದ 30 ಸ್ಥಳಗಳಲ್ಲಿ ಮೂತ್ರಾಲಯ ನಿರ್ಮಿಸಲು ಮಹಾಪೌರ ಬಿ.ಎಲ್.ಭೈರಪ್ಪ ಮಂಗಳವಾರ ಚಾಲನೆ ನೀಡಿದರು. 45 ದಿನಗಳಲ್ಲಿ ಕಾಮಗಾರಿಯು ಮುಗಿದ್ದು. ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿದೆ. ಸೌಲಭ್ಯವು ಉಚಿತವಾಗಿದೆ. ಸ್ವಚ್ಛತಾ ನಗರ ಮೈಸೂರಿನಲ್ಲಿ ಈಗಾಗಲೇ 69 ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿವೆ.

ನಗರದ ಅರಮನೆ ಮೈದಾನ ಆವರಣ, ಕೋಟೆ ಮಾರಮ್ಮ ದೇವಸ್ಥಾನ ಬಳಿ, ಕಂಸಾಳೆ ಮಹದೇವಯ್ಯ, ನಂಜುಮಳಿಗೆ, ರಾಮಸ್ವಾಮಿ, ಬಸವನಗುಡಿ ವೃತ್ತಗಳಲ್ಲಿ, ಗಣಪತಿ ಸಚ್ಚಿದಾನಂದ ಆಶ್ರಮದ ಬಳಿ, ಕುಂಬಾರ ಕೊಪ್ಪಲು ಟೋಲೆಗೇಟ್ ಬಳಿ, ದೇವರಾಜ ಅರಸು ರಸ್ತೆ, ಸೇಂಟ್ ಫಿಲೋಮಿನಾ ಚರ್ಚ್ ಹಾಗೂ ಇತರೆಡೆಗಳಲ್ಲಿ ಮೂತ್ರಾಲಯಗಳು ತಲೆಎತ್ತಲಿವೆ.

ಪ್ರವಾಸಿಗರ ಅನುಕೂಲಕ್ಕಾಗಿ 6 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

Leave a Reply

comments

Related Articles

error: