ಸುದ್ದಿ ಸಂಕ್ಷಿಪ್ತ
ಏ.7ರಂದು ‘ನೃತ್ಯ ಸಂಗಮ’
ಮೈಸೂರು,ಏ.5 : ವಿಜಯನಗರದ ಮೂರನೇ ಹಂತದಲ್ಲಿರುವ ನಗರದ ಸರ್ವೇಶ್ವರ ನೃತ್ಯ ಕಲಾ ಮಂದಿರದಲ್ಲಿ ಏ.7ರ ಸಂಜೆ 6ಕ್ಕೆ ‘ನೃತ್ಯ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಿದೆ.
ಮುಖ್ಯ ಅತಿಥಿಗಳಾಗಿ ರಾಷ್ಟ್ರಕವಿ ಕುವೆಂಪುರವರ ಪುತ್ರಿ ತಾರಿಣಿ ಚಿದಾನಂದ ಗೌಡ, ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಭಾಗಿಯಾಗುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸರ್ವೇಶ್ವರ ನೃತ್ಯ ಕಲಾಮಂದಿರ ಸಹಯೋಗದಲ್ಲಿ ಏರ್ಪಡಿಸಿದೆ. (ಕೆ.ಎಂ.ಆರ್)