ಕರ್ನಾಟಕ

ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ

ಗದಗ,ಏ.05: 5 ತಿಂಗಳ ಮಗುವಿಗೆ ನೇಣಿ ಹಾಕಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.

ಶೃತಿ ಗೋವಿಂದಗೌಡ ಹಿರೇಗೌಡ್ರ ತನ್ನ ಐದು ತಿಂಗಳ ಗಂಡು ಮಗುವನ್ನು ಮೊದಲು ನೇಣು ಹಾಕಿ ನಂತರ ನೇಣಿಗೆ ಶರಣಾಗಿದ್ದಾರೆ. ಮೂಲತಃ ಸವದತ್ತಿ ತಾಲೂಕಿನ ಉಗರಗೋಳ ನಿವಾಸಿ ಗೋವಿಂದಗೌಡ ಹಿರೇಗೌಡ್ರ ಮದುವೆಯಾಗಿದ್ದರು. ಆದರೆ ಪತಿ ಗೋವಿಂದಗೌಡ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ಇಬ್ಬರ ನಡುವೆ  ಗಲಾಟೆ ನಡೆಯುತ್ತಿತ್ತು. ಇದರಿಂದ ಮನನೊಂದು ಶೃತಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮೊದಲು ಮಗುವಿಗೆ ನೇಣು ಬಿಗಿದು ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಂಡನ ಕಿರುಕುಳ ಹಾಗೂ ಆತನ ಅನೈತಿಕ ಸಂಬಂಧದಿಂದ ಬೇಸತ್ತು ಇಂತಹದೊಂದು ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಶೃತಿ ಪೋಷಕರು ಆರೋಪಿಸುತ್ತಿದ್ದಾರೆ. ಶೃತಿ ಸಾಯುವ ಮುನ್ನ ಗಂಡನ ಕಿರುಕುಳ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ.ಎಸ್ )

Leave a Reply

comments

Related Articles

error: