ಕರ್ನಾಟಕಮೈಸೂರು

ಕಾವೇರಿ ವಿವಾದ: ರಾಜ್ಯ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ತಮಿಳುನಾಡಿಗೆ ನೀರು ಬಿಡುವಂತೆ ಹೇಳಿದ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನೀಡಿದ್ದ ಬಂದ್ ಕರೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೈಸೂರಿನಲ್ಲಿಯೂ ಸಂಪೂರ್ಣ ಬಂದ್ ಆಚರಿಸಲಾಗಿದೆ.

ಸುಪ್ರೀಂಕೋರ್ಟ್ ಆದೇಶದ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ರೈತರು ನೀಡಿದ್ದ ಒಂದು ದಿನದ ಬಂದ್ ಕರೆಗೆ ಸಾರಿಗೆ ಸಂಚಾರವೂ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಾ ಹೋಟೆಲ್ ಗಳು, ಬ್ಯಾಂಕ್ ಗಳು, ಕಚೇರಿಗಳು, ಅಂಗಡಿಮುಂಗಟ್ಟುಗಳು, ಉದ್ಯಮಗಳು ಎಲ್ಲವೂ ಮುಚ್ಚಿದ್ದು ಬಂದ್ ಗೆ ಬೆಂಬಲ ಸೂಚಿಸಿದ್ದವು. ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿ ಉದ್ರಿಕ್ತರು ಪ್ರತಿಭಟನೆ ನಡೆಸಿದರು.

ಸುಪ್ರೀಂಕೋರ್ಟ್ ಪ್ರತಿದಿನ 15ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲು ತಿಳಿಸಿತ್ತು ಇದರಿಂದ ವಿವಿಧ ಕನ್ನಡಪರ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದವು.

ಕರ್ನಾಟಕ ರಕ್ಷಣಾ ವೇದಿಕೆ, ಕಾವೇರಿ ಹೋರಾಟ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಬಿನಿ ಹಿತರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಕಾವಲು ಪಡೆ ಸೇರಿದಂತೆ ಹಲವು ಸಂಘಟನೆಗಳು ಮುಂಜಾನೆ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿವೆ. ಪ್ರತಿಭಟನಾಕಾರರು ತಮ್ಮ ಕೋಪವನ್ನು ಟಯರ್ ಗೆ ಬೆಂಕಿ ಹಾಕುವ ಮೂಲಕ ತೀರಿಸಿಕೊಂಡರು.

ashoka-road

ದೇವರಾಜ್ ಅರಸು ರಸ್ತೆ, ಅಶೋಕ ರಸ್ತೆ, ಸಾಡೆ ರಸ್ತೆ, ಚಾಮರಾಜ ಡಬಲ್ ರಸ್ತೆಗಳಲ್ಲಿ ವಾಣಿಜ್ಯೋದ್ಯಮಗಳು, ದಿನಸಿ ಅಂಗಡಿಗಳು, ಹೋಟೆಲ್‍ಗಳು ಪ್ರಮುಖ ಅಂಗಡಿಗಳು ಸ್ವ ಇಚ್ಛೆಯಿಂದ ಬಂದ್‍ಗೆ ಬೆಂಬಲ ನೀಡಿದ್ದವು. ರಾಜ್ಯ ಸಾರಿಗೆ ಬಸ್‍ಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಎಲ್ಲ ಶಿಕ್ಷಣ ಸಂಸ್ಥೆಗಳು ಮೊದಲೇ ರಜೆ ಘೋಷಿಸಿದ್ದವು.  ರಿಕ್ಷಾ, ಕ್ಯಾಬ್ ಗಳು ಬಂದ್‍ಗೆ ಬೆಂಬಲ ನೀಡಿವೆ. ಸರ್ಕಾರಿ ಕಚೇರಿಗಳು ಮುಚ್ಚಿವೆ. ಪ್ರತಿಭಟನಾಕಾರರು ಕೋಟೆ ಆಂಜನೇಯ ದೇವಳದಿಂದ ಸಾಗಿ ಕ್ಲಾಕ್‍ಟವರ್, ಗಾಂಧಿ ಸ್ಕ್ವೇರ್, ಕೆ.ಆರ್.ಸರ್ಕಲ್ ಮತ್ತು ಸಯ್ಯಾಜಿರಾವ್ ರಸ್ತೆಯುದ್ದಕ್ಕೂ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಕೆಲವು ಯುವಕರು ಬೈಕ್ ರ್ಯಾಲಿ ನಡೆಸಿ ಅಲ್ಲಿ ಇಲ್ಲಿ ತೆರೆದಿದ್ದ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಿದರು. ಕೆಲವು ಪ್ರತಿಭಟನಾಕಾರರು ಕೆ.ಆರ್. ಮೊಹಲ್ಲಾದಲ್ಲಿರುವ ಎಲ್‍ಐಸಿ ವಿಭಾಗೀಯ ಕಚೇರಿಗೆ ಕಲ್ಲು ತೂರಿ ಕಚೇರಿಯ ಆಸ್ತಿಗಳನ್ನು ಹಾನಿಗೊಳಿಸಿದ್ದಾರೆ. ಬಳಿಕ ಅಧಿಕಾರಿಗಳು ಕಚೇರಿಯನ್ನು ಮುಚ್ಚಿರುವ ಘಟನೆಯೂ ನಡೆದಿದೆ.

ಹೋಟೆಲ್ ಮಾಲಿಕರ ಸಂಘ, ಸಿಲ್ಕ್ ಇಂಡಸ್ಟ್ರೀಸ್, ಬ್ರಾಹ್ಮಣ ಮಹಾಸಭಾ ಮತ್ತಿತರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ. ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.

irvin-road

Leave a Reply

comments

Related Articles

error: