
ಮೈಸೂರು
ಮಕ್ಕಳ ಮಾರಾಟ ಜಾಲ: ಮತ್ತೆ ಮೂವರ ಬಂಧನ
ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 11ಕ್ಕೆ ಏರಿದೆ.
ನಗರದ ನಿವಾಸಿಗಳಾದ ಶಂಕರ್, ಅಶೋಕ್, ರವಿ ಬಂಧಿತರು. ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಮಕ್ಕಳ ಮಾರಾಟ ಜಾಲದ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳಿಂದ ಇದುವರೆಗೆ 16 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಮಕ್ಕಳ ಮಾರಾಟ ಜಾಲದ ಪ್ರಮುಖ ಆರೋಪಿ ಡಾ.ಉಷಾ ಸೇರಿ 6 ಮಂದಿಯನ್ನು ನ.2ರಂದು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿ ಮೇರೆಗೆ ಇತ್ತೀಚಿಗೆ ಮೂವರನ್ನು ಬಂಧಿಸಲಾಗಿತ್ತು. ಮಕ್ಕಳ ಮಾರಾಟ ಜಾಲದ ಪ್ರಮುಖ ಕೇಂದ್ರವಾಗಿದ್ದ ತಿಲಕ್ನಗರದ ನಸೀಮಾ ನರ್ಸಿಂಗ್ ಹೋಮ್ಗೆ ಇತ್ತೀಚಿಗೆ ಪೊಲೀಸರು ಬೀಗಮುದ್ರೆ ಹಾಕಿದ್ದರು.