ದೇಶಪ್ರಮುಖ ಸುದ್ದಿ

ಸಲ್ಮಾನ್ ಜಾಮೀನು ಅರ್ಜಿ ವಿಚಾರಣೆ: ಶನಿವಾರ ತೀರ್ಪು ಪ್ರಕಟ ಸಾಧ್ಯತೆ

ಜೋಧಪುರ,ಏ.6ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಇಲ್ಲಿನ ಸೆಷೆನ್ಸ್ ನ್ಯಾಯಾಲಯ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದೆ.

ನಿನ್ನೆಯಷ್ಟೇ 1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ಜೋಧಪುರ ನ್ಯಾಯಾಲಯ ವನ್ಯಮೃಗ ಸಂರಕ್ಷಣೆ ಕಾಯ್ದೆಯ 9/51ನೇ ಸೆಕ್ಷನ್‌ ಅಡಿಯಲ್ಲಿ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಸಲ್ಮಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿರುವ ಸೆಷೆನ್ಸ್ ನ್ಯಾಯಾಲಯ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದೆ. ಒಂದು ವೇಳೆ ಶನಿವಾರವೂ ತೀರ್ಪು ಪ್ರಕಟವಾಗಲಿಲ್ಲವೆಂದರೆ ಸೋಮವಾರದವರೆಗೂ ಜೈಲಿನಲ್ಲೇ ಸಲ್ಮಾನ್ ಕಾಲ ಕಳೆಯಬೇಕಾಗಿದೆ. ಸದ್ಯ ಸಲ್ಮಾನ್ ಜೋಧಪುರ ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ. (ಎಂ.ಎನ್)

Leave a Reply

comments

Related Articles

error: