ಮೈಸೂರು

ಸುತ್ತೂರು ಮಠಕ್ಕೆ ಪುತ್ರ ಡಾ.ಯತೀಂದ್ರನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಮೈಸೂರು,ಏ.6:- ಸುತ್ತೂರು ಮಠಕ್ಕೆ ಪುತ್ರ ಡಾ.ಯತೀಂದ್ರನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ತೆರಳಿದ ಸಿಎಂ ಮತ್ತು ಯತೀಂದ್ರ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಬಳಿಕ ಉಭಯಕುಶಲೋಪರಿ ನಡೆಸಿದರು. ಈ ವೇಳೆಮುಖ್ಯಮಂತ್ರಿ ಸಿದ್ದರಾಮಯ್ಯ  ಶ್ರೀಗಳ ಆರೋಗ್ಯವನ್ನು ವಿಚಾರಿಸಿದರು. ಪ್ರವಾಸದ ವೇಳೆ ಸಿಎಂ ಚೇರ್ ನಿಂದ ಬಿದ್ದ ಬಗ್ಗೆ ಶ್ರೀಗಳು ವಿಚಾರಿಸಿದ್ದು, ಅದು ಪ್ಲಾಸ್ಟಿಕ್ ಚೇರ್, ಹಳೆಯದಾಗಿತ್ತು. ಮುರಿದು ತಲೆಗೆ ಪೆಟ್ಟಾಯಿತು ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಹಲವು ಮುಖಂಡರು ಸಿಎಂ ಜೊತೆಗಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಎಸ್ ವೈ ಪುತ್ರ ವಿಜಯೇಂದ್ರ ಭೇಟಿ ನೀಡಿದ ಬೆನ್ನಲ್ಲೇ ಸಿಎಂ ತನ್ನ ಪುತ್ರನೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ದರ ಇಳಿಕೆ ಮಾಡದೇ ಜನರ ಮೇಲೆ ಹೊರೆ ಹೊರಿಸಿದ್ದಾರೆ. ತೈಲ ಬೆಲೆಗಳು ಶೇಕಡ 50 ರಷ್ಟು ಇಳಿಕೆ ಆಗಿದ್ದರೂ ಕೇಂದ್ರ ಸರ್ಕಾರ ಯಥಾಸ್ಥಿತಿ ದರವನ್ನೇ ಮುಂದುವರೆಸುತ್ತಿದೆ. ಜನರಿಗೆ ಶೇ 50 ರಷ್ಟು ಹೊರೆ ಹೆಚ್ಚಾಗುತ್ತಿದೆ. ಕೂಡಲೇ ತೈಲ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಜಾತಿ ರಾಜಕೀಯಕ್ಕಿಂತ ಅಭಿವೃದ್ಧಿ ಪರ ಇರುವವರಿಗೆ ಆಶೀರ್ವಾದ ಮಾಡಲಿದ್ದಾರೆ. ಇಲ್ಲಿಯವರೆಗೆ ಯಾವುದೇ ಚುನಾವಣೆಯಲ್ಲಿ ಜನರಿಗೆ ಹಣ, ಹೆಂಡ ಹಂಚಿಲ್ಲ. ಚುನಾವಣಾ ಅಧಿಕಾರಿಗಳು ಯಾವುದೇ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಪ್ರಭುದ್ದವಾಗಿದ್ದು, ನನ್ನನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ.ನನ್ನ ವಿರೋಧಿಗಳು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾವಾಗಲೂ ನಾನು ಮೂಢ ನಂಬಿಕೆ ವಿರೋಧಿಯಾಗಿರುವವನು.ನನ್ನ ವಿರೋಧಿಗಳ ಹೇಳಿಕೆ ನನಗೆ ಶ್ರೀ ರಕ್ಷೇಯಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: