ಲೈಫ್ & ಸ್ಟೈಲ್

ಟೊಮೆಟೋದಲ್ಲಿದೆ ಬಹುಪಯೋಗಿ ಅಂಶ

ಇದು ತರಕಾರಿಯೂ ಹೌದು. ಹಣ್ಣೂ ಹೌದು ನೋಡಲು ಕೆಂಪಗೆ ಗುಂಡಾಗಿರುವ ಇದನ್ನು ತಮ್ಮ ಆಹಾರ ಪದಾರ್ಥಗಳಲ್ಲಿ ಬಹುಶಃ ಬಳಸದಿರುವವರೇ ಇರಲಿಕ್ಕಿಲ್ಲ. ಸದಾ ವಿವಿಧ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವ ಟೊಮೆಟೋ ಹಣ್ಣಿನಲ್ಲಿ ಹಲವಾರು ರೋಗನಿರೋಧಕ ಶಕ್ತಿಗಳಿವೆ. ಅದರಲ್ಲೂ ಟೊಮೆಟೋ ಸೂಪ್ ಕುಡಿಯುವುದರಿಂದ ಹಲವು ರೋಗಗಳಿಂದ ದೂರವಿರಬಹುದು ಎನ್ನುತ್ತದೆ ಹಾರ್ವರ್ಡ್ ಹೆಲ್ತ್ ಪಬ್ಲಿಕೇಷನ್ಸ್ ಅಧ್ಯಯನ.  ಹಾಗಿದ್ದರೆ ಸೂಪ್ ಕುಡಿಯುವುದರಿಂದ ಸಿಗುವ ಲಾಭಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

  1. ಟೊಮೆಟೋದಲ್ಲಿ ಫೈಬರ್ ಅಂಶವಿರುವುದರಿಂದ ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಳವನ್ನು ಕಡಿಮೆ ಮಾಡುತ್ತದೆ.
  2. ಇದರಲ್ಲಿರುವ ಲಾಯಿಕೋಪಿನ್ ಅಂಶವು ತ್ವಚೆಯು ಸುಕ್ಕುಗಟ್ಟುವುದನ್ನು ತಡೆಯುವುದರೊಂದಿಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ.
  3. ಸೂಪ್ ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ.
  4. ಕಬ್ಬಿಣದಂಶವು ಹೇರಳವಾಗಿದ್ದು ಅನಿಮಿಯಾ, ರಕ್ತಹೀನತೆ ಕಡಿಮೆಯಾಗುತ್ತದೆ.
  5. ಇದರಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಅಂಶವು ಅಸ್ತಮಾ ಬರದಂತೆ ತಡೆಯುತ್ತದೆ.
  6. ವಿಟಾಮಿನ್ ಕೆ ಮತ್ತು ಕ್ಯಾಲ್ಶಿಯಂ ಹೇರಳವಾಗಿದ್ದು ಎಲುಬುಗಳು ಗಟ್ಟಿಯಾಗುತ್ತವೆ ಮತ್ತು ಸಂಧಿನೋವಿನಿಂದ ಮುಕ್ತಿ ದೊರೆಯುತ್ತದೆ.
  7. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ಗಳು ಕ್ಯಾನ್ಸರ್ ಬರದಂತೆ ತಡೆಯಲು ಸಹಕರಿಸುತ್ತದೆ.
  8. ಶರೀರದಲ್ಲಿನ ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಿ ಮಧುಮೇಹ ಬರದಂತೆ ತಡೆಯುತ್ತದೆ.
  9. ಇದರಲ್ಲಿ ವಿಟಾಮಿನ ಸಿ ಅಂಶವು ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  10. ಇದರಲ್ಲಿರುವ ವಿಟಾಮಿನ ಎ ಅಂಶವು ದೃಷ್ಟಿಹೀನತೆಯನ್ನು ತಪ್ಪಿಸುತ್ತದೆ.

Leave a Reply

comments

Related Articles

error: