ಮೈಸೂರು

ದಲಿತರ ಹಿತರಕ್ಷಣೆಗೆ ಬೇಕಾದ ಕಾನೂನು ಕಾಯ್ದೆಗಳನ್ನು ರೂಪಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಏ.6:- ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಕರ್ನಾಟಕ ದಲಿತ ವೇದಿಕೆ ಮೈಸೂರು ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪರಿಶೀಷ್ಟ ಜಾತಿ/ವರ್ಗಗಳ ಹಿತರಕ್ಷಣೆಗಾಗಿ ಜಾರಿಗೆ ತಂದು ಪ.ಜಾತಿ/ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯನ್ನು ನ್ಯಾಯಾಂಗ ಮೂಲಕ ದುರ್ಬಲಗೊಳಿಸಲು ಹುನ್ನಾರ ನಡೆಸುತ್ತಿರುವುದನ್ನು ಕರ್ನಾಟಕ ದಲಿತರ, ದಮನಿತರ ಅಭ್ಯುದಯಕ್ಕಾಗಿ ಕಂಕಣತೊಟ್ಟು ಕಾರ್ಯನಿರ್ವಹಿಸಬೇಕಾದ ಪ್ರಧಾನಮಂತ್ರಿ ಸಂಘಪರಿವಾರದ ಆಣತಿಯಂತೆ ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.ಆದ್ದರಿಂದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ದೇಶದ ದಲಿತರ ಹಿತರಕ್ಷಣೆಗೆ ಬೇಕಾದ ಕಾನೂನು ಕಾಯ್ದೆಗಳನ್ನು ರೂಪಿಸಲು ಮತ್ತು ನ್ಯಾಯಾಲಯದ ನ್ಯಾಯ ಆದೇಶವನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿ.ಎಸ್.ಸಿದ್ದಲಿಂಗಮೂರ್ತಿ, ಎಂ.ರೇವಣ್ಣ, ಹಿನಕಲ್ ಸೋಮು, ಧನಂಜಯ್, ಮಾರ್ಬಳ್ಳಿ ಮಹೇಶ್, ರಾಮು, ಕೆ.ಶಂಕರ್, ಜವರಪ್ಪ, ಅಂದಾನಪ್ಪ, ಶಿವಕುಮಾರ್, ರಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: