ಸುದ್ದಿ ಸಂಕ್ಷಿಪ್ತ

ಏಪ್ರಿಲ್ 11: ಮಂಡ್ಯರಮೇಶ್‍ರ `ರಜಾ-ಮಜಾ’ 2018ರ ಆರಂಭದ ಸಡಗರ

ಮೈಸೂರು,ಏ.6:- ನಟನ ರಂಗ ಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ 16ನೇ ವರ್ಷದ`ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರವನ್ನು ಏಪ್ರಿಲ್ 11ರಿಂದ ಮೇ 07ರ ವರೆಗೆ ಬಲ್ಲಾಳ್ ಸರ್ಕಲ್‍ನಲ್ಲಿರುವ ಭಗಿನೀ ಸೇವಾ ಸಮಾಜ ಶಾಲೆಯ ಆವರಣದಲ್ಲಿ ಆಯೋಜಿಸಿದೆ. ಈ ಶಿಬಿರದ ಆರಂಭದ ಸಡಗರ ಏಪ್ರಿಲ್ 11ರಂದು ಸಂಜೆ 5ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿದ್ದು, ರಂಗಭೂಮಿಯ, ಚಲನಚಿತ್ರದ ಪ್ರಖ್ಯಾತ ಕಲಾವಿದರಾದ ಶರತ್ ಲೋಹಿತಾಶ್ವ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ‘ಮಜಾ ಟಾಕೀಸ್’ಖ್ಯಾತಿಯ ಕುರಿ ಪ್ರತಾಪ್, ಮತ್ತು ತರಂಗ ವಿಶ್ವ, ಕಿರುತೆರೆಯ ಪ್ರಖ್ಯಾತ ನಿರೂಪಕಿ ಶಾಲಿನಿ, ವಾಸುದೇವ ಭಟ್ ಕಾರ್ಯದರ್ಶಿಗಳು ವಿಜಯ ವಿಠ್ಠಲ ವಿದ್ಯಾಸಂಸ್ಥೆ, ಶ್ರೀ ಸತ್ಯಪ್ರಸಾದ್ ಪ್ರಾಂಶುಪಾಲರು, ವಿಜಯ ವಿಠ್ಠಲ ಕಾಲೇಜು ಇವರು ಭಾಗವಹಿಸಲಿದ್ದಾರೆ.

ರಂಗಭೂಮಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಅವರನ್ನು ಪರಿಚಯಿಸಿ, ಗೌರವಿಸುವ ನಿಟ್ಟಿನಲ್ಲಿ ನಟನದ ಅಧ್ಯಕ್ಷರಾದ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ‘ನಟನ ಪುರಸ್ಕಾರ’ವನ್ನು ನೀಡುವ ಯೋಜನೆಯನ್ನು ನಟನ ರೂಪಿಸಿದೆ. ಈ ಬಾರಿ ವೃತ್ತಿರಂಗಭೂಮಿಯಲ್ಲಿ ಬಹುಕಾಲ ಜೀವನ ಸವೆಸಿ ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಬಹು ದೀರ್ಘವಾಗಿ ತೊಡಗಿಕೊಂಡಿರುವ ಹಿರಿಯ ಕಲಾವಿದೆ ಎಮ್.ಎನ್.ಲಕ್ಷ್ಮಿದೇವಿ ಅವರಿಗೆ ಈ ಸಾಲಿನ ‘ನಟನ ಪುರಸ್ಕಾರ’ ಸಮರ್ಪಿಸಲಾಗುತ್ತಿದೆ. ಸ್ಮರಣಿಕೆ, ಅಭಿನಂದನಾ ಪತ್ರ, ಮತ್ತು ನಗದು ಹಣವನ್ನು ಸಂಭ್ರಮದ ನಡುವೆ ಹಿರಿಯ ಕಲಾವಿದೆಗೆ ನೀಡಲಾಗುವುದು. ನಟನದ ಅಧ್ಯಕ್ಷರಾದ ಎನ್. ಸುಬ್ರಹ್ಮಣ್ಯಂ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು.

ಇಡೀ ತಿಂಗಳು ನಡೆಯುವ ಸಡಗರದ ಅರ್ಥಪೂರ್ಣ ರಜಾಮಜಾ ಶಿಬಿರದ ಆರಂಭದ ಮುನ್ನುಡಿಯಾಗಿ ನಟನದ ಕಲಾವಿದರಿಂದ ರಂಗಗೀತೆಗಳು ಮತ್ತು ಪ್ರಧಾನ ಆಕರ್ಷಣೆಯಾಗಿ ನಟನದ ಮಕ್ಕಳಿಂದ ಸುಧಾ ಆಡುಕಳ ಅವರ“ಆಟದ ಪಾಠ ನಾಟಕವನ್ನು ಪ್ರದರ್ಶನಗೊಳ್ಳಲಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: