
ಮನರಂಜನೆ
ಮತ್ತೆ ರಿಮೇಕ್ ಚಿತ್ರದತ್ತ ಮುಖ ಮಾಡಿದ ಪುನೀತ್

ಸದ್ಯ ಸಂತೋಷ್ ಆನಂದರಾಮ್ ನಿರ್ದೇಶನದ ‘ರಾಜ್ ಕುಮಾರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ ಯಾವುದು ಎಂಬುದು ಅವರ ಅಭಿಮಾನಿ ಬಳಗದಲ್ಲಿ ನಿರೀಕ್ಷೆಯಾಗಿತ್ತು.
ಇದಕ್ಕೆ ಉತ್ತರವೆಂಬಂತೆ, ಚಿತ್ರರಂಗದ ಮೂಲಗಳು ಪುನೀತ್ ತಮಿಳಿನಲ್ಲಿ ವಿಶಾಲ್ ನಟಿಸಿದ “ಪೂಜೈ” ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವವರು ಕೊರಿಯೋಗ್ರಾಫರ್ “ಹರ್ಷ”.
ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ನಾಯಕರಾಗಿ ದರ್ಶನ್ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ, ಪುನೀತ್ ರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದು, ಡಿಸೆಂಬರ್ ತಿಂಗಳಲ್ಲಿ ಚಿತ್ರದ ಮುಹೂರ್ತಕ್ಕೆ ತಯಾರಿ ನಡೆದಿದೆ ಎನ್ನಲಾಗುತ್ತಿದೆ.
“ಮುಕುಂದ ಮುರಾರಿ” ಚಿತ್ರದ ಯಶಸ್ಸಿನಲ್ಲಿ ಬೀಗುತ್ತಿರುವ ಎಂ.ಎನ್. ಕುಮಾರ್, ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ತಮಿಳಿನಲ್ಲಿ ವಿಶಾಲ್ ಎದುರು ಶೃತಿ ಹಾಸನ್ ಜೋಡಿಯಾಗಿ ನಟಿಸಿದ ಈ ಚಿತ್ರದ ಕನ್ನಡದ ರಿಮೇಕ್ನಲ್ಲಿ ಪುನೀತ್ ಎದುರು ಯಾರು ಜೋಡಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.