
ಸುದ್ದಿ ಸಂಕ್ಷಿಪ್ತ
ಡಾ.ಬಾಬು ಜಗಜೀವನ ರಾಂ ಜನ್ಮದಿನಾಚರಣೆ
ಮೈಸೂರು,ಏ.6-ಡಾ.ಬಾಬು ಜಗಜೀವನ ರಾಂ ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ (ಲಿಡ್ ಕರ್ ಲೆದರ್ ಎಂಪೋರಿಯಂ) ವತಿಯಿಂದ ಗುರುವಾರ ಮೈಸೂರಿನ ರೈಲ್ವೆ ನಿಲ್ದಾಣದ ಮುಂಭಾಗವಿರುವ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಲಿಡ್ ಕರ್ ನ ಪ್ರಾದೇಶಿಕ ವ್ಯವಸ್ಥಾಪಕರೂ ಜಿಲ್ಲಾ ಸಂಯೋಜಕರೂ ಆದ ಕವಿತಾ ಇತರರು ಚಿತ್ರದಲ್ಲಿದ್ದಾರೆ. (ಎಂ.ಎನ್)