ಕರ್ನಾಟಕಮೈಸೂರು

ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಜಂಬೂ ಸವಾರಿ ಪ್ರತಿಕೃತಿ

ಪ್ರವಾಸೋದ್ಯಮ ಇಲಾಖೆ ಮತ್ತು ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿ.(ಬಿಎಂಆರ್‍ಸಿಎಲ್) ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮೆಟ್ರೋ ಸ್ಟೇಷನ್‍ ಮುಂಭಾಗದಲ್ಲಿ ಬೃಹತ್ ಗಾತ್ರದ ಮೈಸೂರು ದಸರಾ ಜಂಬೂ ಸವಾರಿಯ ಮಾದರಿಯನ್ನು ಪ್ರತಿಷ್ಠಾಪಿಸಿದೆ.

ಮಂಗಳವಾರದಂದು ಈ ಮಾದರಿಯನ್ನು ಸ್ಥಾಪಿಸಲಾಗಿದ್ದು, ಜಂಬೂ ಸವಾರಿ ಆನೆ ಮತ್ತು  ಮಾವುತರ ಪ್ರತಿಕೃತಿಯನ್ನು ಫೈಬರ್ ಗ್ಲಾಸ್‍ನಿಂದ ನಿರ್ಮಿಸಲಾಗಿದೆ.

ಮೈಸೂರು ದಸರಾ ಆಚರಣೆಯ ಅಂಗವಾಗಿ ಈ ಪ್ರತಿಕೃತಿಯನ್ನು ನಿರ್ಮಿಸಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ವಿಶ್ವವಿಖ್ಯಾತ ದಸರಾಗೆ ಪ್ರವಾಸಿಗರನ್ನು ಸ್ವಾಗತಿಸುವ ಸಲುವಾಗಿ ಕಳೆದ ಒಂದೂವರೆ ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಈ ಕಲಾಕೃತಿ ಬಹಳಷ್ಟು ಮಂದಿಯನ್ನು ಆಕರ್ಷಿಸಿತ್ತು. ಹಾಗಾಗಿ ಈ ಜಂಬೂ ಸವಾರಿ ಮಾದರಿಯನ್ನು ಎಲ್ಲರೂ ನೋಡಲಿ ಎಂದು ಮೆಟ್ರೋ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮತ್ತು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಅವರು ಈ ಮಾದರಿಯನ್ನು ಅನಾವರಣಗೊಳಿಸಿದರು. ಫಿಲ್ಮ್ ಸೆಟ್ ಮತ್ತು ಗಣೇಶ ಚತುರ್ಥಿ ಮಂಟಪಗಳ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ಪ್ರತಿರೂಪ್ 8 ಲಕ್ಷ ರು. ವೆಚ್ಚದಲ್ಲಿ ಈ ಕಲಾಕೃತಿಯನ್ನು ನಿರ್ಮಿಸಿದ್ದಾರೆ.

Leave a Reply

comments

Related Articles

error: