ಕ್ರೀಡೆಮನರಂಜನೆ

ಸ್ಯಾಂಡಲ್ ವುಡ್ ಸ್ಟಾರ್ಸ್ ಕಪ್ ಗಾಗಿ ಸೆಣೆಸಲಿದ್ದಾರೆ ತಾರೆಯರು

ರಾಜ್ಯ(ಬೆಂಗಳೂರು)ಏ.7:- ಇಂದಿನಿಂದ ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿ ಆರಂಭವಾಗಲಿದ್ದು, ವಿಶೇಷ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಕ್ರೀಡಾ ಚಿತ್ರ ತಾರೆಯರಿಗೆ ಶುಭ ಹಾರೈಸಿದರು.

ನೆಲಮಂಗಳದ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಚಿತ್ರತಾರೆಯರು ಸ್ಯಾಂಡಲ್ ವುಡ್ ಸ್ಟಾರ್ಸ್ ಕಪ್ ಗಾಗಿ ಸೆಣೆಸಲಿದ್ದಾರೆ. ಇಂದು ನಾಲ್ಕು ತಂಡಗಳ ನಡುವೆ ಸೆಣೆಸಾಟ ನಡೆಯಲಿದ್ದು, ನಾಲೆ ಮತ್ತೆರಡು ಪಂದ್ಯದ ನಂತರ ಕೊನೆಯಲ್ಲಿ ಎರಡು ತಂಡ ಫೈನಲ್ ಪ್ರವೇಶಿಸಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಹಲವು ಪ್ರಮುಖ ತಾರೆಯರು ಮೈದಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಸಿಎಂ ಆಗಮನದ ವೇಳೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಾರಾ ಗೋವಿಂದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: