
ಮೈಸೂರು
ಫಿಡೆಲ್ ಕಮ್ಯುನಿಷ್ಟ್ ಚಳುವಳಿಗೆ ಸ್ಫೂರ್ತಿಯ ಸೆಲೆ: ಕಾ. ಚಂದ್ರಶೇಖರ
ದಮನ ಮಾಡುವವರ ವಿರುದ್ಧ ದಮನಿತರು ನಿರಂತರ ನಡೆಸುವ ಹೋರಾಟ ಕ್ರಾಂತಿ ಎಂದು ಕ್ಯಾಸ್ಟ್ರೋ ಹೇಳುತ್ತಿದ್ದರು ಎಂದು ಕಾ. ಚಂದ್ರಶೇಖರ ಮೇಟಿ ಹೇಳಿದರು.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಎಸ್ ಯುಐಸಿ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕ್ಯೂಬಾದ ಕ್ರಾಂತಿಕಾರಿ ಕಮ್ಯುನಿಷ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಕಾ. ಚಂದ್ರಶೇಖರ ಮೇಟಿ ಮಾತನಾಡಿದರು.
ಅವರ ಮಾತುಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತವೆ. ಸಂಪನ್ಮೂಲಗಳಿಲ್ಲದ ಕ್ಯೂಬಾ ರಾಷ್ಟ್ರ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುವಂತಾಗಲು ಕ್ಯಾಸ್ಟ್ರೋ ಅವರ ಆಡಳಿತವೇ ಕಾರಣ. ಅಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಉಚಿತವಾಗಿ ದೊರಕುತ್ತದೆ. ಅವರಿಂದಾಗಿ ಕ್ಯೂಬಾ ರಾಷ್ಟ್ರ ಇಡೀ ಪ್ರಪಂಚದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಕಮ್ಯುನಿಷ್ಟ್ ಚಳುವಳಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯೆ ಸಂಧ್ಯಾ, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಯಶೋಧರ್, ಸೀಮಾ ಮತ್ತಿತರರು ಉಪಸ್ಥಿತರಿದ್ದರು.