ಮೈಸೂರು

ಫುಟ್‍ಪಾತ್‍ ಅತಿಕ್ರಮಣ ತೆರವುಗೊಳಿಸಿ: ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ

ನಗರದ ಚಾಮರಾಜ ಜೋಡಿರಸ್ತೆಯಲ್ಲಿ ಅಂಗಡಿಯವರು ಫುಟ್‍ಪಾತ್‍ ಅನ್ನು ಅತಿಕ್ರಮಣ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯ ಸದಸ್ಯರು ಬುಧವಾರದಂದು ಪ್ರತಿಭಟನೆ ನಡೆಸಿದರು.

ಚಾಮರಾಜ ಜೋಡಿರಸ್ತೆಯು ಇತಿಹಾಸ ಪ್ರಸಿದ್ಧವಾಗಿದ್ದು ರಸ್ತೆಯ ಆಸುಪಾಸಿನಲ್ಲಿ ಪಾದಚಾರಿಗಳು ಓಡಾಡಲು ಅನುಕೂಲವಾಗಲೆಂದು ಹಿಂದಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಗಿಡಗಳನ್ನು ನೆಟ್ಟಿದ್ದರು. ಈ ವ್ಯವಸ್ಥೆ ಈಗ ದುರುಪಯೋಗವಾಗುತ್ತಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫುಟ್‍ಪಾತ್‍ಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯುಂಟಾಗಿದೆ. ಹಾಗಾಗಿ ಪಾಲಿಕೆಯು ಕೂಡಲೇ ಈ ಬಗ್ಗೆ ಗಮನಹರಿಸಿ ಅತಿಕ್ರಮಣ ಮಾಡಿರುವ ಜಾಗವನ್ನು ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರ ಅಧ್ಯಕ್ಷ ಪ್ರಜೀಶ್ ಪಿ., ಜಗದೀಶ್ ಪಿ., ಶಾಂತಮೂರ್ತಿ ಆರ್. ಪಾಲಹಳ್ಳಿ ನಟರಾಜ್, ರವಿತೇಜ, ಮಿನಿ ಬಂಗಾರಪ್ಪ, ಶ್ರೀನಿವಾಸ್ ರಾಜ್‍ಕುಮಾರ್, ಸಿ.ಎಸ್. ನಂಜುಂಡಸ್ವಾಮಿ, ಗೋಪಾಲಕೃಷ್ಣ, ಸುನಿಲ್ ಕುಮಾರ್, ನಂದಕುಮಾರ್, ಸ್ವಾಮಿ, ಉಮೇಶ್, ನಿತ್ಯಾನಂದ, ಮೂರ್ತಿ, ರವಿಚಂದ್ರ, ಪಾಪು, ಅಭಿ, ಮಹೇಶ್, ಧೀರಜ್ ಮತ್ತು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: