ಮೈಸೂರು

ಚುನಾವಣೆಗಾಗಿ ಕಟ್ಟುನ ನಿಟ್ಟಿನ ಕ್ರಮ : ಒಂದು ಕೆಜಿ ಚಿನ್ನ ವಶ : ಕೆ.ಬಿ.ಶಿವಕುಮಾರ್

ಮೈಸೂರು,ಏ.7:- 2018 ಚುನಾವಣಾ ನೀತಿ ಸಂಹಿತೆ ಇರೋದರಿಂದ ಎಲ್ಲಾ ರೀತಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ   ಅವರು ಒಂದು ಕೆಜಿ ಚಿನ್ನ , 7 ಲಕ್ಷದ 48 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿದೆ. 2 ಸಾವಿರ ವಿವಿಧ ಪಕ್ಷಗಳ ಪೋಸ್ಟರ್ ಗಳು ಜಪ್ತಿ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 55 ಕೇಸ್ ಗಳು  ದಾಖಲಾಗಿದೆ. 52 ದೂರುಗಳನ್ನು  ಕೈಗೆತ್ತಿಕೊಂಡಿದ್ದೇವೆ ಎಂದರು. ಅಧಿಕಾರಿಗಳಿಗೆ ಎಲೆಕ್ಟ್ರಾನಿಕಲ್ ಪೋಸ್ಟಿಂಗ್ ಬ್ಯಾಲೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 263 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ

ಎರಡು ಸಾವಿರ ವಿವಿಧ ಪಕ್ಷಗಳ ಪೋಸ್ಟರ್ ಗಳು ಜಪ್ತಿ ಮಾಡಲಾಗಿದೆ.ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎರಡು ಬೋರ್ ವೆಲ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಒಟ್ಟು 37 ಜನರನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗಿದೆ. ಚುನಾವಣಾ ಪ್ರಚಾರಕ್ಕೆ ವಾಹನಗಳನ್ನು ಬಳಕೆ ಮಾಡಲು ನೀತಿಸಂಹಿತೆ ಅನ್ವಯ ವಾಗಲಿದ್ದು. ಯಾರಾದರೂ ಪ್ರಚಾರ ಕಾರ್ಯಕ್ಕೆ‌ ಪರವಾನಗಿ ಇಲ್ಲದೆ ಬಳಸಿದರೆ ಕ್ರಮ ಕೈಗೊಳ್ಳಲಾಗುವುದು. 7 ಅಬಕಾರಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ, 52 ಇತರೆ ಚೆಕ್ ಪೋಸ್ಟ್ ಗಳು ತೆರೆಯಲಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣೆಯ ಬಗ್ಗೆ ಅರಿವು ಮೂಡಿಸಲು ನಾಳೆಯಿಂದ ಮಿಂಚಿನ ನೊಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 18 ವರ್ಷ ತುಂಬಿರುವ ಎಲ್ಲರೂ ತಮ್ಮ ಹೆಸರನ್ನು  ನೋಂದಾಯಿಸಬಹುದು. ಪ್ರತಿಯೊಂದು ಬೂತ್ ಮಟ್ಟದಲ್ಲೂ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: