ಕ್ರೀಡೆಪ್ರಮುಖ ಸುದ್ದಿ

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತ-ಪಾಕಿಸ್ತಾನ ಹಾಕಿ ಪಂದ್ಯಾವಳಿ ಡ್ರಾ ನಲ್ಲಿ ಅಂತ್ಯ

ಗೋಲ್ಡ್ಕೋಸ್ಟ್,ಏ.7-ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಹಾಗೂ ಪಾಕಿಸ್ತಾನದ ಪುರುಷರ ಹಾಕಿ ಪಂದ್ಯಾವಳಿ ಡ್ರಾ ನಲ್ಲಿ ಅಂತ್ಯಗೊಂಡಿದೆ.

ಶನಿವಾರ ನಡೆದ ಮೊದಲ ಪಂದ್ಯಾವಳಿಯಲ್ಲಿ 2-2 ರಿಂದ ರೋಚಕ ಡ್ರಾ ಸಾಧಿಸಿವೆ. 59ನೇ ನಿಮಿಷದಲ್ಲಿ ಗೋಲು ಬಾರಿಸಿದ ಪಾಕ್ ಅಲಿ ಮುಬಶರ್ ಪಂದ್ಯ ಡ್ರಾಗೊಳ್ಳಲು ಕಾರಣರಾದರು.

ಯುವ ಆಟಗಾರ ದಿಲ್ಪ್ರೀತ್ ಸಿಂಗ್ 13ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಆರಂಭದಲ್ಲೇ ಭಾರತ 1-0 ಮುನ್ನಡೆ ಸಾಧಿಸಿತು. 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್ಪ್ರೀತ್ ಸಿಂಗ್ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಮೂರನೇ ಕ್ವಾರ್ಟರ್ 38ನೇ ನಿಮಿಷದಲ್ಲಿ ಗೋಲು ಬಾರಿಸಿದ ಪಾಕ್ ಇರ್ಫಾನ್ ಜೂನಿಯರ್ ಪಾಕ್ ತಂಡ ತಿರುಗೇಟು ನೀಡಲು ನೆರವಾದರು.

ಭಾರತ ಕೊನೆಯ ತನಕ 2-1 ಮುನ್ನಡೆ ಕಾಯ್ದುಕೊಂಡು ಹೋರಾಟ ನೀಡಲು ಯಶಸ್ವಿಯಾಗಿತ್ತು. ಟಿವಿ ಅಂಪೈರ್ ನೀಡಿದ ವಿವಾದಾತ್ಮಕ ಪೆನಾಲ್ಟಿಕಾರ್ನರ್ ಅವಕಾಶದಿಂದಾಗಿ ಅಲಿ ಮುಬಶರ್ 59ನೇ ನಿಮಿಷದಲ್ಲಿ ಗೋಲು ಬಾರಿಸಿ ಪಾಕ್ 2-2 ರಿಂದ ರೋಚಕ ಡ್ರಾ ಸಾಧಿಸಲು ನೆರವಾದರು. (ಎಂ.ಎನ್)

Leave a Reply

comments

Related Articles

error: