
ವಿದೇಶ
ಬಸ್-ಲಾರಿ ನಡುವೆ ಅಪಘಾತ: ಜೂನಿಯರ್ ಹಾಕಿ ಆಟಗಾರರು, ಬಸ್ ಚಾಲಕ ಸೇರಿ 14 ಸಾವು
ಕೆನೆಡಾ,ಏ.7-ಜೂನಿಯರ್ ಹಾಕಿ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಸ್ ಚಾಲಕ ಹಾಗೂ 13 ಮಂದಿ ಆಟಗಾರರು ಸಾವನ್ನಪ್ಪಿರುವ ಘಟನೆ ಕೆನಡದ ಸಾಸ್ಕಾಚೆವನ್ ಪ್ರಾಂತ್ಯದ ತಿಸ್ದಲೆ ಬಳಿ ನಡೆದಿದೆ.
ಬಸ್ ನಲ್ಲಿ 16 ರಿಂದ 21 ವಯೋಮಾನದ 28 ಮಂದಿ ಆಟಗಾರರು ಪ್ರಯಾಣಿಸುತ್ತಿದ್ದರು. ಈ ಪೈಕಿ ಬಸ್ ನ ಚಾಲಕ ಸೇರಿ 13 ಮಂದಿ ಆಟಗಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.
ಸಾಸ್ಕಾಚೆವನ್ ಜೂನಿಯರ್ ಹಾಕಿ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಹಂಬೋಲ್ಟ್ ಬ್ರಾಂಕೋಸ್ ಜೂನಿಯರ್ಸ್ ಹಾಕಿ ತಂಡ ತೆರಳುತ್ತಿತ್ತು. (ಎಂ.ಎನ್)