ಪ್ರಮುಖ ಸುದ್ದಿ

ವಿರೋಧ ಪಕ್ಷಗಳನ್ನು ಸಿಎಂ ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ : ಕಾಂಗ್ರೆಸ್ ನವರು ಬೆಂಬಲ ಕೊಡಕ್ಕಾಗತ್ತಾ? : ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ(ಬೆಂಗಳೂರು)ಏ.7:- ವಿರೋಧ ಪಕ್ಷಗಳನ್ನು ಸಿಎಂ ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಮನಸ್ಸು ಮಾಡಿದರೆ ಕುಮಾರಸ್ವಾಮಿ, ಯಡಿಯೂರಪ್ಪನವರನ್ನು ಸೋಲಿಸಬಲ್ಲೆ ಎನ್ನುತ್ತ ವಿರೋಧ ಪಕ್ಷದವರನ್ನು ಬ್ಲಾಕ್ ಮೇಲ್ ಮಾಡಲಿಕ್ಕೆ ಹೊರಟಿದ್ದಾರೆ. ನೀವೆನು ನಮಗೆ ಬೆಂಬಲ ಕೊಡೋದಿಕ್ಕೆ ಇದ್ದೀರಾ? ನೀವಿರೋದೆ ಅದಿಕ್ಕಲ್ಲವೇ? ಕಾಂಗ್ರೆಸ್ ನವರು ಬೆಂಬಲ ಕೊಡಕ್ಕಾಗತ್ತಾ? ನಾವು ಕೂಡ ನಮ್ಮ ಪಕ್ಷದವರನ್ನು ಗೆಲ್ಲಿಸುತ್ತೇವೆ. ಅದು ನಮ್ಮ ಕರ್ತವ್ಯ. ಸಿದ್ದರಾಮಯ್ಯನವರನ್ನು ಸೋಲಿಸಲಿಕ್ಕೆ ಹೋಗ್ತೇನೆ ಅಂತ ಎಲ್ಲಿಯಾದರೂ ಹೇಳಿದ್ದೇನಾ? ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿಕ್ಕೆ ಹೋಗೋದು.ನೀವು ಕೂಡ ನಿಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿಕ್ಕೆ ಓಡಾಡ್ತೀರಿ. ನಾನು ನಿಮ್ಗೆ ಓಡಾಡ್ಬೇಡಿ ಅಂತ ಹೇಳಕಾಗತ್ತಾ?ರಾಮನಗರಕ್ಕೆ ಒಂದು ದಿನ ಬಂದು ಪ್ರವಾಸ ಮಾಡಿದರೆ ಎಂಬ ಉದ್ಧಟತನದ ಮಾತುಗಳೆಲ್ಲ ಬೇಡ ಎಂದರು. ಚುನಾವಣಾ ಸಮಯದಲ್ಲಿ ಹಲವು ವಿಷಯಗಳು ಚರ್ಚೆಯಾಗುತ್ತಿವೆ. ಅದರಲ್ಲಿ ವಿಶೇಷವಾಗಿ ಮುಖ್ಯಮಂತ್ರಿಗಳು ಚುನಾವಣೆಗೆ ನಿಲ್ಲತಕ್ಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಚರ್ಚೆಗಳಾಗುತ್ತಿವೆ. ಮುಖ್ಯಮಂತ್ರಿಗಳು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ನಿರ್ಧಾರ ಮಾಡಿದ ಮೇಲೆ ಅವರು ಯಾವ ರೀತಿಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ತಾ ಹೋಗ್ತಿದ್ದಾರೆ ಎನ್ನುವುದು ತಿಳಿಯುತ್ತಿದೆ. ಗುಪ್ತಚರ ಇಲಾಖೆ ಚುನಾವಣೆ ಘೋಷಣೆಯಾದ ಮೇಲೆ ಚುನಾವಣಾ ಆಯೋಗಕ್ಕೆ ವರದಿ ನೀಡಬೇಕು. ಆದರೆ ಇಂಟಲಿಜೆನ್ಸ್ ಬ್ಯೂರೋ ಮುಖ್ಯಮಂತ್ರಿಯವರ ಕಚೇಋಇಗೆ ವರದಿಯನ್ನು ಕಳಿಸಿದೆ. ನೀವು ಚಾಮುಂಡೇಶ್ವರಿಯಲ್ಲಿ ಚುನಾವಣೆಗೆ ನಿಲ್ಲೋದು ಸೇಫ್ ಅಲ್ಲ, ಅಲ್ಲಿ ಜಿ.ಟಿ.ದೇವೇಗೌಡ ಕಣದಲ್ಲಿದ್ದಾರೆ. ಒಕ್ಕಲಿಗರು ಅವರ ಪರವಾಗಿದ್ದಾರೆ. ಗಂಗಾವತಿ, ಬಸವಕಲ್ಯಾಣ, ಶಾಂತಿನಗರ ಇಲ್ಲಿ ಎಲ್ಲಾದರೂ ನಿಲ್ಲಿ ಅಂತ.  ಅದು ಅವರು ಕ್ಷೇತ್ರದಲ್ಲಿ ಐದಾರು ದಿನ ಪ್ರಚಾರ ಮಾಡಿ ತೆರಳಿದ ಮೇಲೆ ವರದಿ ನೀಡುತ್ತಿದ್ದಾರೆ. ಅಂದರೆ ಅವರು ಅಧಿಕಾರವನ್ನು ಯಾವ ರೀತಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಅಕ್ರಮ ನಡೆಸಲಿಕ್ಕೆ ಅಂತಲೇ ಕೆಂಪಯ್ಯನನ್ನು ಅಸಾಂವಿಧಾನಿಕ ಹುದ್ದೆ ನೀಡಿ ಕೂರಿಸಿದ್ದಾರೆ. 2013ರಲ್ಲಿ ಚುನಾವಣೆ ಮೈಸೂರಿನಲ್ಲಿ ನಡೆದಾಗ ಕುಮಾರಸ್ವಾಮಿ ಪಲಾಯನ ಮಾಡಿದಾರೆ ಅಂದಿದ್ದರು. ನಾನು ಪಲಾಯಣ ಮಾಡಿರಲಿಲ್ಲ. ಆರೋಗ್ಯದ ಸಮಸ್ಯೆಯಿಂದ ಸ್ನೇಹಿತನ ತೋಟದ ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದೆ. ಮತದಾರರಲ್ಲದವರು ಕ್ಷೇತ್ರದಲ್ಲಿ ನಿಲ್ಲಬಾರದು ಎಂದು ಹೇಳಿದ್ದಕ್ಕೆ ತೆರಳಿದ್ದು ಅಕ್ರಮ ಮಾಡಲಿಕ್ಕೆ ಹೋಗಿದ್ದಲ್ಲ. ಅನ್ಯಾಯವನ್ನೂ ಮಾಡಿಲ್ಲ, ಅಕ್ರಮವನ್ನೂ ಮಾಡಿಲ್ಲ. ನಮ್ಮಪ್ಪ ದೇವೇಗೌಡರು ಕೂಡ ಅಕ್ರಮ ಮಾಡಿಲ್ಲ. ಕುಮಾರಸ್ವಾಮಿ ಅಪ್ಪರಪ್ಪನಾಣೆ ಗೆಲ್ಲಲ್ಲ ಅಂದಿದ್ದೀರಲ್ಲ. ನೀವು ನಿಮ್ಮಪ್ಪನಾಣೆ ಚಾಮುಂಡೇಶ್ವರಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: