ದೇಶಪ್ರಮುಖ ಸುದ್ದಿಮೈಸೂರು

ಚಿತ್ರ ಪ್ರದರ್ಶನದ ಮೊದಲು ರಾಷ್ಟ್ರಗೀತೆ ಕಡ್ಡಾಯ

ನವದೆಹಲಿ: ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಕಡ್ಡಾಯವಾಗಿ ರಾಷ್ಟ್ರಗೀತೆ ಮೊಳಗಬೇಕು ಮತ್ತು ತೆರೆಯ ಮೇಲೆ ರಾಷ್ಟ್ರಧ್ವಜವನ್ನು ತೋರಿಸಬೇಕು ಎಂದು ಬುಧವಾರದಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ರಾಷ್ಟ್ರಗೀತೆ ಹಾಕಿದಾಗ ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು. ಇದರಿಂದ ನಮ್ಮಲ್ಲಿ ದೇಶಭಕ್ತಿ, ರಾಷ್ಟ್ರೀಯತೆ ಜಾಗೃತವಾಗುತ್ತದೆ ಎಂದು ಸುಪ್ರೀಂ ಹೇಳಿದೆ.

ಭೋಪಾಲ್‍ನಲ್ಲಿ ಎನ್‍ಜಿಒವೊಂದನ್ನು ನಡೆಸುತ್ತಿರುವ ನಾರಾಯಣ್ ಚೌಸ್ಕಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಪ್ರತಿ ಚಿತ್ರಮಂದಿರದಲ್ಲೂ ಚಿತ್ರ ಪ್ರದರ್ಶನದ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಕಬೇಕೆಂದು 1960ರಲ್ಲಿ ಆದೇಶ ಹೊರಡಿಸಲಾಗಿದ್ದು, 1990ರಲ್ಲಿ ಈ ಆದೇಶವನ್ನು ಕೈಬಿಡಲಾಗಿತ್ತು.

Leave a Reply

comments

Related Articles

error: