
ಮೈಸೂರು
ಏ.9ರಿಂದ ಸುತ್ತೂರಿನಲ್ಲಿ ಗ್ರಾಮೀಣ ಯುವಜನ ಶಿಬಿರ
ಮೈಸೂರು,ಏ.7 : ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಸುತ್ತೂರಿನಲ್ಲಿ ಏ.9ರಿಂದ 11ರವರೆಗೆ ಗ್ರಾಮೀಣ ಯುವಜನರ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು.
ಏ.9ರಂದು ಸ್ವಾವಲಂಭಿ ಬದುಕಿಗಾಗಿ ಕಾನೂನಿನ ಅರಿವು ಕುರಿತು ಪ್ರೊ.ಸಿ.ಬಸವರಾಜು, ಸೇವಾ ಮನೋಭಾವ ಕುರಿತು ಜಿ.ಎಸ್.ನಟೇಶ್, ಸಿರಿಧಾನ್ಯನಗಳ ಮಹತ್ವ ಕುರಿತು ಡಾ.ಖಾದರ್, ಏ.10ರಂದು ಧರ್ಮ ವೈಚಾರಿಕತೆ ಕುರಿತು ಡಾ.ಶರತ್ ಚಂದ್ರ ಸ್ವಾಮೀಜಿ, ಸಿದ್ದೇಶ್ವರ ಶ್ರೀಗಳಿಂದ ಪ್ರವಚನ, ಬದುಕಿನಲ್ಲಿ ಆಶಯ ಕುರಿತು ಶಿವಶಂಕರ ಬೆಳ್ಳಿಯಪ್ಪ, ಏ.11ರಂದು ಕೃಷಿ ಯುವಜನತೆ ಕುರಿತು ಎನ್.ಕೇಶವ ಮೂರ್ತಿ, ಭಾರತೀಯ ಸಂಸ್ಕೃತಿ ಕುರಿತು ಪ್ರೊ.ಶಂಭು ವಿ ಬಳಿಗಾರ್, ಮಾನವೀಯ ಮೌಲ್ಯಗಳ ಕುರಿತು ಪ್ರೊ.ಮಲೆಯೂರು ಗುರುಸ್ವಾಮಿ ಉಪನ್ಯಾಸ ನೀಡುವರು.
ನಿತ್ಯ ಜೆಎಸ್ಎಸ್ ಲಲಿತಾ ಕಲಾವೃಂದದಿಂದ ಪ್ರಾರ್ಥನೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ಯೋಗ ಧ್ಯಾನ ದೇಶಿ ಆಟಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. (ಕೆ.ಎಂ.ಆರ್)