
ಕ್ರೀಡೆ
ಐಪಿಎಲ್ ಹನ್ನೊಂದನೆ ಆವೃತ್ತಿಯ ಟಿ.20 ಪಂದ್ಯದ ಚಾಲನೆಗೆ ಕ್ಷಣಗಣನೆ
ದೇಶ(ಮುಂಬೈ)ಏ.7:- ಇಂದು ಸಂಜೆ ವಾಂಖೆಡೆ ಮೈದಾನದಲ್ಲಿ ಐಪಿಎಲ್ ಹನ್ನೊಂದನೆ ಆವೃತ್ತಿಯ ಟಿ.20 ಪಂದ್ಯದ ಚಾಲನೆಗೆ ಕ್ಷಣಗಣನೆ ನಡೆದಿದೆ.
ರಾತ್ರಿ 8ಗಂಟೆಗೆ ಪಂದ್ಯ ಉದ್ಘಾಟನೆಗೊಳ್ಳಲಿದ್ದು,ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲೆಸೆಯಲಿದೆ.
ಚೆನ್ನೈ ತಂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು,ಧೋನಿ, ಸುರೇಶ್ ರೈನಾ, ಕೇದಾರ್ ಜಾಧವ್, ಮುರಳಿ ವಿಜಯ್, ಡ್ವೇನ್ ಬ್ರಾವೋ, ಫ್ಯಾಪ್ ಡುಪ್ಲೆಸಿಸ್, ಶೇನ್ ವಾಟ್ಸ್ ರನ್ ಮಳೆ ಸುರಿಸಲು ಸಿದ್ಧರಾಗಿದ್ದರೆ, ಮುಂಬೈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಎಲವಿನ್ ಲೂಯಿಸ್, ಕೀರೋನ್ ಪೋಲ್ಲಾರ್ಡ್, ಈಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಜೆ.ಪಿ.ಡ್ಯುಮಿನಿ ರನ್ ಸಿಡಿಸಲು ಸಿದ್ಧರಾಗಿದ್ದಾರೆ. ಎರಡೂ ಬಲಿಷ್ಠ ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಪಂದ್ಯ ರೋಚಕವಾಗಿರಲಿದೆ. (ಎಸ್.ಎಚ್)