
ಪ್ರಮುಖ ಸುದ್ದಿಮೈಸೂರು
ಮುದ್ರಣ ದೋಷ ಹಿನ್ನೆಲೆ: ಮೈಸೂರಿನಲ್ಲಿಯೇ ಮುದ್ರಣ ಸಾಧ್ಯತೆ?
500ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣದಲ್ಲಿ ಸಾಕಷ್ಟು ಮುದ್ರಣ ದೋಷಗಳು ಕಂಡು ಬಂದಿವೆ ಎಂಬ ಹಿನ್ನೆಲೆಯಲ್ಲಿ ಇದೀಗ 500ರೂ. ಮುಖಬೆಲೆಯ ನೋಟುಗಳನ್ನು ಮೈಸೂರಿನಲ್ಲಿಯೇ ಮುದ್ರಿಸಲಾಗುತ್ತದೆ ಎನ್ನುವ ಕುರಿತು ನಂಬಲರ್ಹ ಮೂಲಗಳಿಂದ ಮಾಹಿತಿ ಲಭಿಸಿದ್ದು, ಮೈಸೂರು ಘಟಕದಲ್ಲಿಯೇ ಮುದ್ರಣವಾಗುವ ಸಾಧ್ಯತೆ ಇದೆ.
ಈ ಹಿಂದೆ 500ರೂ.ಮುಖಬೆಲೆಯ ಹೊಸ ನೋಟುಗಳನ್ನು ನಾಸಿಕ್ ದಲ್ಲಿ ಮುದ್ರಣಗೊಳಿಸಲಾಗಿತ್ತು. ಆದರೆ ಅಲ್ಲಿ ಮುದ್ರಣವಾದ ಹೊಸ ನೋಟುಗಳು ಸಾಕಷ್ಟು ಮುದ್ರಣ ದೋಷಗಳಿಂದ ಕೂಡಿತ್ತು ಎಂಬುದು ತಿಳಿದು ಬಂದಿತ್ತು. ಮುದ್ರಣಗಳಲ್ಲಿ ದೋಷ ಕಂಡು ಬಂದರೂ ಆ ನೋಟನ್ನು ಸ್ವೀಕರಿಸಲಾಗುವುದು ಎಂದು ಆರ್.ಬಿ.ಐ ತಿಳಿಸಿತ್ತು. ಆದರೆ ಮತ್ತೆ ಮುದ್ರಣ ದೋಷಗಳು ನಡೆಯಬಾರದೆನ್ನುವ ಹಿನ್ನೆಲೆಯಲ್ಲಿ 500ರೂ.ಮುಖಬೆಲೆಯ ನೋಟುಗಳನ್ನೂ ಸಹ ಮೈಸೂರಿನಲ್ಲಿಯೇ ಮುದ್ರಿಸಲಾಗುವುದು ಎಂಬ ಮಾಹಿತಿ ಬಲ್ಲಮೂಲಗಳಿಂದ ತಿಳಿದು ಬಂದಿದೆ.