ಮೈಸೂರು

ನಾಳೆ ಮತದಾರರ “ಮಿಂಚಿನ ನೋಂದಣಿ”

ಮೈಸೂರು, ಏ.7 :  ನಾಳೆ ಮತದಾರರ ಪಟ್ಟಿಯ ಮಿಂಚಿನ ನೋಂದಾಣಿಯನ್ನು ಹಮ್ಮಿಕೊಳ್ಳಲಾಗಿದೆ. ಭಾರತ ಚುನಾವಣಾ ಆಯೋಗವು “ಮಿಂಚಿನ ನೋಂದಣಿ” ಆಂದೋಲನದ ಮೂಲಕ ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಲು ಅನುವಾಗುವಂತೆ ದಿನಾಂಕ 01-01-2018ರ ಅರ್ಹತಾ ದಿನಾಂಕಕ್ಕೆ 18 ವರ್ಷ ಪೂರ್ಣಗೊಂಡಿರುವವರು ಹೆಸರನ್ನು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿ ಹೋಗಿರುವವರು ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿಕೊಳ್ಳಲು ಮತ್ತು ವಿಶೇಷವಾಗಿ ಮಹಿಳೆಯರಿಗೆ, ದುರ್ಬಲ ವರ್ಗದವರಿಗೆ, ಹಾಡಿಯಲ್ಲಿ ವಾಸವಾಗಿರುವವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ದಿನಾಂಕ 8 ರಂದು ಮಿಂಚಿನ ನೋಂದಣಿ ವಿಶೇಷ ಆಂದೋಲನವನ್ನು ಎಲ್ಲಾ 2687 ಮತಗಟ್ಟೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 8 ರಂದು ಎಲ್ಲಾ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ವಿಶೇಷ ಆಂದೋಲನವನ್ನು ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಹೆಸರುಗಳನ್ನು ಮತಗಟ್ಟಿ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  (ಕೆ.ಎಂ.ಆರ್)

Leave a Reply

comments

Related Articles

error: