ಮೈಸೂರು

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿಪ್ರಸಹಾಯವಾಣಿಯ 3 ನೇ ಶಾಖೆ ಉದ್ಘಾಟನೆ, ವಿಪ್ರ ಮುಖಂಡರಿಗೆ ಅಭಿನಂದನೆ

ಮೈಸೂರು, ಏ.7:- ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ವಿಪ್ರ ಸಮುದಾಯದವರನ್ನು ರಕ್ಷಿಸಲು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಸಮಾಜದಲ್ಲಿ ಲಭ್ಯವಿರುವ ಸವಲತ್ತುಗಳ ಬಗ್ಗೆ  ವಿಪ್ರರಿಗೆ ಮಾಹಿತಿ ನೀಡುವ ಸಲುವಾಗಿ ಸ್ಥಾಪಿತವಾಗಿರುವ ವಿಪ್ರ ಸಹಾಯವಾಣಿ ಕೇಂದ್ರವನ್ನು ಮಹದೇವಪುರ ಬಡಾವಣೆಯಲ್ಲಿಂದು ಇಳೈ ಆಳ್ವಾರ್ ಸ್ವಾಮೀಜಿ ಉದ್ಘಾಟಿಸಿದರು.

ವಿಪ್ರ ಸಹಾಯವಾಣಿ ಕೇಂದ್ರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಜೆಡಿಎಸ್ ಯುವ ಮುಖಂಡ ಹರೀಶ್ ಗೌಡ ಮಾತನಾಡಿ ಬ್ರಾಹ್ಮಣ ಸಮುದಾಯ ಬುದ್ಧಿವಂತ ಸಮಾಜ, ಮುಂದುವರೆದ ಜನಾಂಗವಾಗಿದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ರಕ್ಷಣೆಯಾಗಬೇಕಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ  ಬ್ರಾಹ್ಮಣ ಯುವಕರು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಮಾತನಾಡಿ ವಿಪ್ರಸಹಾಯವಾಣಿ ಪ್ರತಿಯೊಂದು ಬಡಾವಣೆಯಲ್ಲಿ ಸ್ಥಾಪಿತವಾದರೆ ಸಮುದಾಯ ಬಲಿಷ್ಠವಾಗುತ್ತದೆ ಸಂಘಟನಾತ್ಮಕವಾಗಿ ಕಾರ್ಯಕರ್ತರನ್ನು ಹೆಚ್ಚಿಸಬಹುದು ಹಾಗೂ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಂದಾಗಬಹುದು ಎಂದರು,

ಬ್ರಾಹ್ಮಣ ಯುವ ವೇದಿಕೆಯ ಹೆಚ್ ಎನ್ ಶ್ರೀಧರಮೂರ್ತಿ ಮಾತನಾಡಿ ಒಂದುಲಕ್ಷಕ್ಕೂ ಹೆಚ್ಚು ಬ್ರಾಹ್ಮಣರು ಮೈಸೂರಿನಲ್ಲಿದ್ದು ಸಮುದಾಯಕ್ಕೆ ಯಾವುದೇ ಸೌಲಭ್ಯಗಳಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಸಂಘಟನಾತ್ಮಕವಾಗಿ ಒಗ್ಗೂಡಬೇಕಾಗಿದೆ ಆಚಾರ್ಯತ್ರೆಯರ ಜಯಂತಿಗಳನ್ನು ಮತ್ತು ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಸವಲತ್ತುಗಳು ಕೊಡಿಸುವ ಕಡೆ ಮುಂದಿನ ದಿನಗಳಲ್ಲಿ ಸರ್ಕಾರ ಮುಂದಾಗಬೇಕು ಎಂದರು,

ಕಾರ್ಯಕ್ರಮದಲ್ಲಿ ಮಹದೇವಪುರ ಬಡಾವಣೆಯ ಹಿರಿಯರಾದ ಜಯರಾಮ್, ಶ್ರಿರಾಂಪುರ ಗ್ರಾಮ ಪಂಚಾಯ್ತಿ ಸದಸ್ಯ ವೆಂಕಟೇಶ್ ಕಾರಂತ್, ತ್ರಿಶಾಖ ವಿಪ್ರಬಳಗದ ಶ್ರೀಧರಶರ್ಮ, ರಾಮಕೃಷ್ಣನಗರ ಗಣಪತಿ ದೇವಸ್ಥಾನದ ಪಣೀಶ್, ವಿಪ್ರ ಮಹಿಳಾ ಸಂಘದ ವಿಜಯಾ ರಾಧ ಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಪ್ರ ಸಹಾಯವಾಣಿಯ ಜಯಸಿಂಹ, ವಿಕ್ರಂ ಅಯ್ಯಂಗಾರ್,  ಅಜಯ್ ಶಾಸ್ತ್ರಿ, ರಂಗನಾಥ್,

ಕಡಕೊಳ ಜಗದೀಶ್, ಸಾಯಿ ಗಣೇಶ್ , ಪುನೀತ್ ಕೊಡ್ಲೂರು, ಸುಮಂತ್ ಶಾಸ್ತ್ರಿ, ಪ್ರಶಾಂತ್,ಕೇಬಲ್ ಅಜಯ್ ಮುಂತಾದವರು ಭಾಗವಹಿಸಿದ್ದರು. (ಎಸ್.ಎಚ್)

 

 

Leave a Reply

comments

Related Articles

error: