
ಕ್ರೀಡೆಪ್ರಮುಖ ಸುದ್ದಿ
ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ನಾಲ್ಕನೇ ಚಿನ್ನ ಗೆದ್ದುಕೊಟ್ಟ ರಾಹುಲ್
ಗೋಲ್ಡ್ ಕೋಸ್ಟ್,ಏ.7-ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ರಾಗಲಾ ವೆಂಕಟ್ ರಾಹುಲ್ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
85 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ರಾಹುಲ್ ಒಟ್ಟು 338 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಕ್ರೀಡಾಕೂಟದಲ್ಲಿ ಭಾರತ 4 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದಿದೆ. ಕುಂದಾಪುರದ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿದ್ದರು. ಭಾರತದ ಎಲ್ಲ ಆರು ಪದಕಗಳು ವೇಟ್ ಲಿಫ್ಟಿಂಗ್ ಮೂಲಕವೇ ಬಂದಿರುವುದು ಗಮನಾರ್ಹ. (ಎಂ.ಎನ್)