ಮೈಸೂರು

ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಅಮಾನತುಗೊಳಿಸಿ : ವಿವಿಧ ಸಂಘಟನೆಗಳ ಒತ್ತಾಯ

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು ವಿವಿ ಸಂಶೋಧಕರ ಸಂಘ, ಬಹುಜನ ವಿದ್ಯಾರ್ಥಿ ಸಂಘ ಹಾಗೂ ಮೈಸೂರು ವಿವಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪಾರದರ್ಶಕ ಕಾಯಿದೆ ಉಲ್ಲಂಘಿಸಿ ಕಂಪ್ಯೂಟರ್ ಖರೀದಿ, ಅಕ್ರಮ ನೇಮಕಾತಿ ಹಾಗೂ ಇನ್ನಿತರ ಅವ್ಯವಹಾರಗಳು ನಡೆದಿರುವ ಕುರಿತು ನ್ಯಾಯಮೂರ್ತಿ ಭಕ್ತವತ್ಸಲ ಅವರ ಏಕ ಸದಸ್ಯಪೀಠ ವರದಿ ನೀಡಿದ್ದು, ಆರೋಪ ಸಾಬೀತಾಗಿದೆ. ಅವರನ್ನು ನ್ಯಾಯಾಲಯವು 15ದಿನಗಳ ಕಾಲ ಬಂಧಿಸದಂತೆ ತಾತ್ಕಾಲಿಕವಾಗಿ ಆದೇಶಿಸಿದೆ. ಆದರೆ ಎಫ್.ಐ.ಆರ್ ದಾಖಲಾಗಿರುವ ಹಾಲಿ ಮೈಸೂರು ಕುಲಪತಿ ಪ್ರೊ.ರಂಗಪ್ಪ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಘನತೆಯನ್ನು ಎತ್ತಿ ಹಿಡಿಯಲು ಈ ಕೂಡಲೇ ಅವರನ್ನು ಕುಲಪತಿ ಹುದ್ದೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗುರುಮೂರ್ತಿ, ಸಂಶೋಧಕರ ಸಂಘದ ಅಧ್ಯಕ್ಷ ಮೂರ್ತಿ, ಬಿ.ವಿ.ಎಸ್.ಅಧ್ಯಕ್ಷ ನವೀನ್ ಮೌರ್ಯ, ಮೈಸೂರು ವಿವಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಮು ಕೆ.ಎಸ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: