ಕರ್ನಾಟಕ

ಕ್ಷೇತ್ರವನ್ನು ಮಿನಿಸಿಂಗಾಪುರ್ ಮಾಡ್ತೀನಿ ಅಂದಿದ್ದ ಶಾಸಕ ಖೇಣಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

ರಾಜ್ಯ(ಬೀದರ್)ಏ.8:-  ಇಲ್ಲಿನ ದಕ್ಷಿಣ ಶಾಸಕ ಅಶೋಕ್ ಖೇಣಿಯವರಿಗೆ ಬಗದಲ್ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶಾಸಕರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆಯೇ ಘೇರಾವ್ ಹಾಕಿದ ಗ್ರಾಮಸ್ಥರು, ಏನ್ ಸ್ವಾಮೀ ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀವಿ ಅಂಥ ಹೇಳಿದ್ರಿ. ಈ ರಸ್ತೆ ನೋಡಿ, ಇದೇನಾ ಮಿನಿ ಸಿಂಗಾಪುರ್.. ಇದೇನಾ ನಿಮ್ಮ ಅಭಿವೃದ್ಧಿ.. ಅಂತ ಕಿಡಿಕಾರುವ ಮೂಲಕ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿ ಎಸಿ ಕಾರ್‍ನಲ್ಲೇ ಕುಳಿತ ಶಾಸಕರು, ಜನರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಸೈಲೆಂಟ್ ಆಗಿ ಜಾಗ ಖಾಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: